Sports

ಸೀಮಿತ ಓವರ್ ಗಳಲ್ಲಿ ಶಮಿ, ಬುಮ್ರಾರನ್ನು ಸರದಿಯ ಮೇಲೆ ಆಡಿಸಲು ಚಿಂತನೆ

ನವದೆಹಲಿ, ನ.19 (ಯುಎನ್ಐ)- ಟೀಮ್ ಇಂಡಿಯಾ ಬಹು ನಿರೀಕ್ಷಿತ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಲು ಪ್ರವಾಸ ಬೆಳಿಸಿದೆ. ಈ ಪ್ರವಾಸದ ಆರಂಭದಲ್ಲಿ ಏಕದಿನ ಹಾಗೂ ಟಿ-20 ಪಂದ್ಯಗಳು ಹಾಗೂ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯನ್ನು ವಿರಾಟ್ ಪಡೆ ಗೆಲುವಿನತ್ತ ಚಿತ್ತ ನೆಟ್ಟಿದ್ದು, ತನ್ನ ಸ್ಟಾರ್ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದೆ.

ಅಂದಹಾಗೆ ಟೀಮ್ ಇಂಡಿಯಾದಲ್ಲಿ ಪ್ರಸಕ್ತ ಸ್ಟಾರ್ ಬೌಲರ್ ಗಳ ದಂಡೇ ಇದೆ. ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ ಬುಮ್ರಾ ಹಾಗೂ ಸ್ವಿಂಗ್ ಬೌಲಿಂಗ್ ಕರಗತ ಮಾಡಿಕೊಂಡಿರುವ ಮೊಹಮ್ಮದ ಶಮಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಇಬ್ಬರೂ ಏಕದಿನ ಹಾಗೂ ಚುಟುಕು ಸೇರಿದಂತೆ ಟೆಸ್ಟ್ ಪಂದ್ಯಗಳಲ್ಲಿ ಆಡಲಿದ್ದಾರೆ.

ಈ ಇಬ್ಬರ ಆಟಗಾರ ವರ್ಕ್ ಲೋಡ್ ಕಡಿಮೆ ಮಾಡಲು ಟೀಮ್ ಇಂಡಿಯಾ ಮ್ಯಾನೆಜ್ಮೆಂಟ್ ಹೊಸ ತಂತ್ರಕ್ಕೆ ಮಣೆ ಹಾಕಿದೆ. ಇಶಾಂತ ಶರ್ಮಾ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಅಲಭ್ಯರರಾದಲ್ಲಿ ಇವರ ಅನುಪಸ್ಥಿತಿಯಲ್ಲಿ ಈ ಸ್ಟಾರ್ ಬೌಲರ್ ಗಳು ತಂಡದ ವೇಗದ ಸವಾಲನ್ನು ಎಸೆಯಲಿದ್ದಾರೆ.

ಬುಮ್ರಾ ಹಾಗೂ ಶಮಿ ಅವರನ್ನು ಮುಂಬರುವ 12 ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಈ ಬಗ್ಗೆ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ, ನಾಯಕ ವಿರಾಟ ಕೊಹ್ಲಿ, ಬೌಲಿಂಗ್ ಕೋಚ್ ಭರತ ಅರುಣ ಸಹ ಈ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಭ್ಯಾಸ ವೇಳೆ ಶಮಿ ಅವರು ಟೆಸ್ಟ್ ಬೌಲಿಂಗ್ ಮೇಲೆ ಹೆಚ್ಚಿನ ಕೇಂದ್ರ ಹರಿಸಿದ್ದು ಕಂಡು ಬಂದಿತು.

ಇನ್ನು ಶಮಿ ಹಾಗೂ ಬುಮ್ರಾ ಅವರು ಏಕದಿನ ಪಂದ್ಯಗಳನ್ನು ಆಡಿ ತಮ್ಮ 10 ಓವರ್ ಗಳನ್ನು ಪೂರೈಸಿ, ಅಭ್ಯಾಸ ಪಂದ್ಯದ ವೇಳೆ ಟೆಸ್ಟ್ ಬೌಲಿಂಗ್ ಬಗ್ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!