Kolhapur

ಮಹಾರಾಷ್ಟ್ರದಲ್ಲಿ ಕರ್ನಾಟಕ ವಾಹನ ಸಂಚರಿಸಲು ಬಿಡೊಲ್ಲ

ಕೊಲ್ಹಾಪುರ, ೧೯- ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ತಮ್ಮ ನಾಯಕ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ ನೀಡಿದ್ದ ಹೇಳಿಕೆಗೆ
ರಾಜ್ಯದಲ್ಲಿ ತೀವ್ರ ಟೀಕೆಯುಂಟಾದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಎನ್ ಸಿ ಪಿ ಮಹಾರಾಷ್ಟ್ರ ದಲ್ಲಿ ಕನಾ೯ಟಕದ ಯಾವುದೇ ವಾಹನ ಸಂಚರಿಸಲು ಅವಕಾಶ ನೀಡುವದಿಲ್ಲವೆಂದು ಬೆದರಿಕೆ ಹಾಕಿದೆ.

” ನಮ್ಮ ನಾಯಕ, ಉಪಮುಖ್ಯಮಂತ್ರಿ ಅಜಿತ ಪವಾರ ಅವರ ಪುತ್ಥಳಿಗಳಿಗೆ ಚಪ್ಪಲಿ ಹಾಕಿ, ಅವಮಾನಿಸಿ, ಸುಟ್ಟು ಹಾಕಲಾಗಿದೆ. ಹಾಗಾಗಿ ಕರ್ನಾಟಕಕ್ಕೆ ಎಚ್ಚರಿಕೆ ಕೊಡಲೆಂದೇ ಅಲ್ಲಿನ ಯಾವುದೇ ವಾಹನಗಳನ್ನೂ ಮಹಾರಾಷ್ಟ್ರದಲ್ಲಿ ಸಂಚರಿಸಲು ಬಿಡುವುದಿಲ್ಲ” ಎಂದು ಮಹಾರಾಷ್ಟ್ರ ಎನ್ ಸಿ ಪಿ ಯುವ ಘಟಕದ ಅಧ್ಯಕ್ಷ ಮೆಹಬೂಬ ಶೇಖ ಹೇಳಿದ್ದಾರೆ.

ಬೆಳಗಾವಿ ಸೇರಿಸಿ ಸಂಯುಕ್ತ ಮಹಾರಾಷ್ಟ್ರ ಮಾಡುವುದು ನಮ್ಮ ಕನಸು ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಡಿಸಿಎಂ ಪವಾರ ಹೇಳಿಕೆಯನ್ನು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅನೇಕ ಸಚಿವರು, ಕನ್ನಡ ಸಂಘಟನೆಗಳು ಖಂಡಿಸಿದ್ದವು. ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಡಿಸಿಎಂ ಪವಾರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಬೆಂಕಿ ಹಚ್ಚಿತ್ತು.

Leave a Reply

Your email address will not be published. Required fields are marked *

Back to top button
error: Content is protected !!