Vijayapur

ಗುಮ್ಮಟ ನಗರಿಯಲ್ಲಿ ಮತ್ತೆ ಮೊಳಗಿತು ಗುಂಡಿನ ಧ್ವನಿ

ವಿಜಯಪುರ, 19- ಗುಮ್ಮಟಗಳಿಂದ ವಿಶ್ವಪ್ರಸಿದ್ದವಾಗಿರುವ ಗುಮ್ಮಟಗಳ ನಗರ ವಿಜಯಪುರ ಇತ್ತೀಚಿನ ದಿನಗಳಲ್ಲಿ ಅಪರಾಧಗಳಿಂದ, ಗುಂಡಿನ ಸದ್ದುಗಳಿಂದ ಹೆಸರುವಾಸಿಯಾಗುತ್ತಿದೆ.

ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಗುಂಡಿನ ದಾಳಿಯಲ್ಲಿ ಓವ೯ ಗಾಯಗೊಂಡಿದ್ದಾನೆ. ನಗರದ ಜಿಲ್ಲಾ ಪಂಚಾಯತ್ ಬಳಿಯ ವಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬುಧವಾರ ರಾತ್ರಿ 9 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.

ಘಟನೆಯಲ್ಲಿ ಬೇಗಂ ತಾಲಾಬ ತಾಂಡಾದ ನಿವಾಸಿ ಬುದ್ದು ರಾಠೋಡ ಎಂಬಾತನಿಗೆ ಗುಂಡು ತಗುಲಿದೆ‌. ತುಳಸಿರಾಮ ಹರಿಜನ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ. ಇನ್ನೋವಾ ಕಾರ್ ರಿಪೇರಿ ಮತ್ತು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಉಂಟಾಗಿ ತುಳಸಿರಾಮ ಗುಂಡು ಹಾರಿಸಿದ್ದಾನೆ. ಬುದ್ದು ರಾಠೋಡಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್ ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ‌. ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತಿಚೆಗೆಷ್ಟೇ ಮದ್ಯಾಹ್ನವೇ ಗುಂಡಿನ ದಾಳಿ ಸೇರಿದಂತೆ ಪೆಟ್ರೋಲ್ ಬಾಂಬ್ ಬಳಸಿ ಇಬ್ಬರ ಹತ್ಯೆಗೈಯಲಾಗಿತ್ತು.

ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿರುವ ಭೀಮಾ ತೀರದಲ್ಲಿ ಕೇಳುತ್ತಿದ್ದ ಗುಂಡಿನ ಸದ್ದು ವಿಜಯಪುರ ನಗರದಲ್ಲಿಯೂ ಕೇಳಿಸಿದೆ. ಇತ್ತೀಚೆಗಷ್ಟೇ ಭೀಮಾತೀರದ ಮಹಾದೇವ ಸಾಹುಕಾರ್ ಬೈರಗೊಂಡ ಮೇಲೆ ನಡೆದ ಗುಂಡಿನ ದಾಳಿಯಿಂದ ಜಿಲ್ಲೆ ಚೇತರಿಸಿಕೊಂಡಿಲ್ಲ. ಆಗಲೇ ಈ ಘಟನೆ ನಡೆದು ಜನ ಬೆಚ್ಚಿಬೀಳುವಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!