Bengaluru

ಲಾಕ್ ಡೌನ್ ನಂತರ ಇಂದು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಲಿರುವ ಸಿದ್ದರಾಮಯ್ಯ

ಬೆಂಗಳೂರು, 19- ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿನಿಮಾ ಪ್ರೇಮಿ ಎಂಬುವದು ಎಲ್ಲರಿಗೂ ಗೊತ್ತು. ಕಾಲೇಜು ದಿನಗಳಲ್ಲಿ ಅವರು ಡಾ. ರಾಜಕುಮಾರ ಅವರ ಅಭಿಮಾನಿಯಾಗಿದ್ದರು. ಅವರ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಿದ್ದರು. ಸಿನಿಮಾ ಕುರಿತು ಆಗಿನ ಅವರ ಆಸಕ್ತಿ ಇನ್ನೂ ಉಳಿದಿದೆ. ಒಳ್ಳೆಯ ಸಿನಿಮಾ ರಿಲೀಸ್ ಆದರೆ ತಾವು ಎಷ್ಟೇ ಬ್ಯುಸಿ ಇದ್ದರೂ ಬಿಡುವ ಮಾಡಿಕೊಂಡು ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಥಿಯೇಟರ್ ಗೆ ಹೋಗಿ ನೋಡುತ್ತಾರೆ.

ಮುಖ್ಯಮಂತ್ರಿಯಾಗಿದ್ದಾಗ ಪುನೀತ ರಾಜಕುಮಾರ ಅವರ “ರಾಜಕುಮಾರ”, ತೆಲುಗಿನ “ಬಾಹುಬಲಿ” ಮುಂತಾದ ಚಿತ್ರ ನೋಡಿದ್ದಾರೆ. ಹಾಗೆಯೇ ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಚಿತ್ರತಂಡಗಳಿಗೆ ಆಶೀವಾ೯ದ ಮಾಡಿದ್ದಾರೆ.

ಕೊರೋನಾ ಕಾರಣ ಕಳೆದ ಎಂಟು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ತೆರೆದಿವೆ. ಹೊಸ ಚಿತ್ರ “ಆಕ್ಟ್ 1978” ಎಂಬ ಕನ್ನಡ ಚಿತ್ರ ನಾಳೆ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ, ತುಂಬಾ ದಿನಗಳಿಂದ ಚಿತ್ರಮಂದಿರದಲ್ಲಿ ಯಾವುದೇ ಸಿನಿಮಾ ನೋಡಿಲ್ಲದ ಅವರು ಈಗ 8 ತಿಂಗಳ ನಂತರ ಮೊಟ್ಟಮೊದಲ ಬಾರಿಗೆ ಸಿನಿಮಾ ನೋಡಲಿದ್ದಾರೆ.

ಚಿತ್ರದ ನಿರ್ಮಾಪಕರು ಇಂದು ಸಂಜೆ ಚಿತ್ರಮಂದಿರವೊಂದರಲ್ಲಿ ಪ್ರೀಮಿಯರ್ ಶೋ ಏರ್ಪಡಿಸಿದ್ದು ಸಿದ್ದರಾಮಯ್ಯ ಕೂಡ ವೀಕ್ಷಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ಮಂಸೋರೆ ಈ ಚಿತ್ರದ ನಿರ್ದೇಶಕರು.

Related Articles

Leave a Reply

Your email address will not be published. Required fields are marked *

Back to top button
error: Content is protected !!