Bhopal

ಇನ್ನು ಮಧ್ಯಪ್ರದೇಶದಲ್ಲಿ ಆಕಳು ಮಂತ್ರಿ, ಉನ್ನತ ಅಧಿಕಾರಿಗಳು

ಭೋಪಾಲ, 19- ಮಧ್ಯಪ್ರದೇಶದಲ್ಲಿ ಗೋವುಗಳ ಸಂರಕ್ಷಣೆಗಾಗಿ ‘ಗೋವು ಸಚಿವಾಲಯ’ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಚಿವಾಲಯದ ಉಸ್ತುವಾರಿಗೆ ಓರ್ವ ಮಂತ್ರಿ ಇರಲಿದ್ದು ಹಿರಿಯ ಅಯ್ಎಎಸ್ ದರ್ಜೆಯ ಅಧಿಕಾರಿಗಳೂ ನೋಡಿಕೊಳ್ಳಲಿದ್ದಾರೆ.

ಈ ಕುರಿತು ಪ್ರಕಟಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ,
ಪಶು ಸಂಗೋಪನೆ, ಅರಣ್ಯ, ಪಂಚಾಯಿತಿ, ಗ್ರಾಮೀಣ ಅಭಿವೃದ್ಧಿ, ಗೃಹ ಮತ್ತು ರೈತ ಕಲ್ಯಾಣ ಇಲಾಖೆಗಳು ಈ ಗೋವು ಸಚಿವಾಲಯದ ಭಾಗವಾಗಿರಲಿವೆ.

‘ರಾಜ್ಯದಲ್ಲಿ ಗೋವುಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ನಾವು ಗೋವು ಸಚಿವಾಲಯ ಸ್ಥಾಪನೆಗೆ ನಿರ್ಧರಿಸಿದ್ದೇವೆ. ಪಶು ಸಂಗೋಪನೆ, ಅರಣ್ಯ, ಪಂಚಾಯಿತಿ ಮತ್ತು ಗ್ರಾಮೀಣ ಅಭಿವೃದ್ಧಿ, ಕಂದಾಯ, ಗೃಹ ಮತ್ತು ರೈತ ಕಲ್ಯಾಣ ಇಲಾಖೆಗಳು ಈ ಗೋವು ಸಚಿವಾಲಯದ ಭಾಗವಾಗಿರಲಿವೆ’ ಎಂದು ಚೌಹಾಣ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!