New Delhi

ವೇದಾಂತ ಉದ್ಯಮ ಗುಂಪಿಗೆ ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್

ನವದೆಹಲಿ, ನ 18(ಯುಎನ್ಐ) ದೇಶದ ಎರಡನೇ ಅತಿ ದೊಡ್ಡ ಚಿಲ್ಲರೆ ಇಂಧನ ಮಾರಾಟ ಸಂಸ್ಥೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್)ನಲ್ಲಿರುವ ಸರ್ಕಾರದ ಪಾಲನ್ನು ಸ್ವಾಧೀನ ಪಡಿಸಿಕೊಳ್ಳಲು ವೇದಾಂತ ಉದ್ಯಮ ಗುಂಪು ಆಸಕ್ತಿ ವ್ಯಕ್ತಪಡಿಸುವ ಪತ್ರ (ಇ.ಒ.ಐ.) ದಾಖಲಿಸಿದೆ.
ಅಸ್ತಿತ್ವದಲ್ಲಿರುವ ವೇದಾಂತ ತೈಲ, ಅನಿಲ ವ್ಯವಹಾರದ ಮತ್ತಷ್ಟು ವಿಸ್ತರಣೆಗೆ ಬಿಪಿಸಿಎಲ್ ಸ್ವಾಧೀನ ಮತ್ತಷ್ಟು ಅವಕಾಶ ನೀಡಲಿದೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ಬಿ ಪಿ ಸಿ ಎಲ್ ನಲ್ಲಿ ಕೇಂದ್ರ ಸರ್ಕಾರ ಶೇ 52.98 ರಷ್ಟು ಪಾಲನ್ನು ಹೊಂದಿದ್ದು, ಪ್ರಸ್ತುತ ತೀವ್ರ ರೀತಿಯ ಆರ್ಥಿಕ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ, ಹಲವಾರು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಾಟದ ಮೂಲಕ ನಿಧಿ ಸಂಗ್ರಹಿಸುತ್ತಿದೆ. ಇದರ ಭಾಗವಾಗಿ ಬಿಪಿಸಿಎಲ್ ನಲ್ಲಿರುವ ತನ್ನ ಪಾಲನ್ನು ಮಾರಾಟ ಮಾಡುತ್ತಿದೆ. ನವಂಬರ್ 16 ರಂದು ಬಿಪಿಸಿಎಲ್ ಬಿಡ್ಡಿಂಗ್ ಗಾಗಿ ಆಸಕ್ತಿ ವ್ಯಕ್ತಪಡಿಸುವ ಪತ್ರ (ಇ.ಒ.ಐ.) ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಂಡಿದೆ. ಬಿ ಪಿ ಸಿ ಎಲ್‌ ನಲ್ಲಿರುವ ಪಾಲನ್ನು ಉಪಸಂಹರಿಸುವ ಮೂಲಕ ದೇಶೀಯ ಇಂಧನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಗೆ ದಾರಿ ಮಾಡಿಕೊಡುತ್ತದೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!