Bengaluru

ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಏರಿಕೆ: ಮರಣ ದರ 1.17ಕ್ಕೆ ಇಳಿಕೆ

ಬೆಂಗಳೂರು, ನ 18 [ಯುಎನ್ಐ] ರಾಜ್ಯದಲ್ಲಿ 1,791 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,65,931 ಕ್ಕೆ ಎರಿಕೆಯಾಗಿದೆ. ಒಂದೇ ದಿನ 1,947 ಸೋಂಕಿತರು ಗುಣಮುಖರಾಗಿದ್ದು, ಈ ವರೆಗೆ 8,29,188 ಚೇತರಿಸಿಕೊಂಡಿದ್ದಾರೆ. ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡು ಬರುತ್ತಿದ್ದು, ಚೇತರಿಕೆ ಪ್ರಕರಣದಲ್ಲಿ ಹೆಚ್ಚಳವಾಗಿದೆ.

ಕಳೇದ 24 ಗಂಟೆಗಳಲ್ಲಿ 24 ಮಂದಿ ಮೃತಪಟ್ಟಿದ್ದು, ಒಟ್ಟು ಸತ್ತವರ ಸಂಖ್ಯೆ 11,578ಕ್ಕೆ ಏರಿಕೆಯಾಗಿದೆ. ಮರಣದರ 1.17ಕ್ಕೆ ಇಳಿಕೆಯಾಗಿದೆ. 636 ಮಂದಿ ಐಸಿಯುನಲ್ಲಿ ಚಕಿತ್ಡೆ ಪಡೆಯುತ್ತಿದ್ದು, 25,146 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರದಿಂದ ಈವರೆಗೆ 97,042 ಕೊರೋನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಈವರೆಗೆ 97,41,051 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ.

ಬಾಗಲಕೋಟೆಯಲ್ಲಿ 14, ಬಳ್ಳಾರಿ 18, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 33, ಬೆಂಗಳೂರು ನಗರ 933, ಬೀದರ್ 7, ಚಾಮರಾಜನಗರ 4, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 8, ಚಿತ್ರದುರ್ಗ 44, ದಕ್ಷಿಣ ಕನ್ನಡ 45, ದಾವಣಗೆರೆ 16, ಧಾರವಾಡ 14, ಗದಗ 12, ಹಾಸನ 71, ಹಾವೇರಿ 5, ಕಲಬುರಗಿ 15, ಕೊಡಗು 13, ಕೋಲಾರ 21, ಕೊಪ್ಪಳ 1, ಮಂಡ್ಯ 56, ಮೈಸೂರು 97, ರಾಯಚೂರು 8, ರಾಮನಗರ 10, ಶಿವಮೊಗ್ಗ 17, ತುಮಕೂರು 86, ಉಡುಪಿ 33, ಉತ್ತರ ಕನ್ನಡ 31, ವಿಜಯಪುರ 121 ಮತ್ತು ಯಾದಗಿರಿ 12 ಪ್ರಕರಣಗಳು ಪತ್ತೆಯಾಗಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!