New Delhi

ದೇಶದಲ್ಲಿ 89 ಲಕ್ಷ ಗಡಿ ದಾಟಿದ ಕೊರೋನಾ ಪ್ರಕರಣ

ನವದೆಹಲಿ, ನ 18(ಯುಎನ್ಐ) ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಸರಣ ಮುಂದುವರಿದಿದೆ. ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 89 ಲಕ್ಷದ ಗಟಿ ದಾಟಿವೆ. ಕಳೆದ 24 ಗಂಟೆಗಳಲ್ಲಿ 38,617 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸೋಂಕಿನಿಂದ 474 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 89,12,907ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 1, ಲಕ್ಷ 30,993ಕ್ಕೆ ತಲುಪಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ದೇಶಲ್ಲಿ ಪ್ರಸ್ತುತ 4 ಲಕ್ಷ 46 ಸಾವಿರದ 805 ಸಕ್ರಿಯ ಪ್ರಕರಣಗಳಿದ್ದು, ಮಂಗಳವಾರ 44,739 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ 83,35,109 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ 93.52ರಷ್ಟಿದೆ. ಮರಣ ಪ್ರಮಾಣ 1.47ಕ್ಕೆ ಇಳಿಕೆಯಾಗಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ ಶೇ 5.01ರಷ್ಟಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!