BengaluruBelagavi

ಸೂರ್ಯ ಚಂದ್ರರಿರುವವರೆಗೆ ಬೆಳಗಾವಿ ಕರ್ನಾಟಕದ್ದೇ

ಬೆಂಗಳೂರು, ೨೦- ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ ಪವಾರ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳ ಮಹಾರಾಷ್ಟ್ರ ಸೇರ್ಪಡೆ ಕುರಿತು ಪ್ರತಿಪಾದಿಸಿದ್ದರೆ, ಕರ್ನಾಟಕದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ “ಬೆಳಗಾವಿ ಕರ್ನಾಟಕದ್ದು, ಸೂರ್ಯ-ಚಂದ್ರರಿರುವರೆಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ಮತ್ತೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಡಿಸಿಎಂ ಅಜಿತ ಪವಾರ ಹೇಳಿಕೆ ಖಂಡನೀಯ. ರಾಜ್ಯದಲ್ಲಿರುವ ಮರಾಠಿಗರ ಸಮಾಧಾನಕ್ಕೆ ಈ ರೀತಿಯ ಅನಗತ್ಯ ಗೊಂದಲವನ್ನುಂಟು ಮಾಡುವ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿರುವ ಇಲ್ಲ ಭಾಷಿಕರೂ ನೆಮ್ಮದಿಯಾಗಿದ್ದಾರೆ, ಅವರು ಪವಾರ ಮಾತಿಗೆ ಸ್ಪಂದಿಸುವದಿಲ್ಲವೆಂದು ಸವದಿ ಹೇಳಿದರು.

ಅಜಿತ ಪವಾರ “ಬೆಳಗಾವಿ, ನಿಪ್ಪಾಣಿ, ಕಾರವಾರ ನಮ್ಮದು. ಅಖಂಡ ಮಹಾರಾಷ್ಟ್ರ ಠಾಕ್ರೆ ಅವರ ಕನಸಾಗಿದೆ” ಎಂದಿದ್ದರು. ಮಹಾ ಡಿಸಿಎಂ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!