Mumbai

ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳ ಮಹಾರಾಷ್ಟ್ರ ಸೇರ್ಪಡೆ ಬಾಳ ಠಾಕ್ರೆ ಕನಸಂತೆ

  1. ಮುಂಬಯಿ, ೨೦- ಇತ್ತ ರಾಜ್ಯ ಸರಕಾರ ಮರಾಠಿ ಭಾಷಿಕರ ಓಲೈಕೆಗಾಗಿ “ಮರಾಠಾ ಅಭಿವೃದ್ದಿ ಪ್ರಾಧಿಕಾರ” ರಚನೆ ಮಾಡಿ 50 ಕೋಟಿ ರು. ಮೀಸಲಿಟ್ಟಿರುವ ಬೆನ್ನಲೆ ಮಹಾರಾಷ್ಟ್ರ ಸಕಾ೯ರ ಪುನಃ ಗಡಿ ವಿಷಯಕ್ಕೆ ಕೈ ಹಾಕಿದೆ.

ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಜಯಂತಿ ದಿನ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್ ಸಿ ಪಿ ಯ ಅಜಿತ ಪವಾರ್, ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಪ್ರದೇಶಗಳಾದ ಕಾರವಾರ, ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಭಾಲ್ಕಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬುವದು ಠಾಕ್ರೆಯವರ ಕನಸು ಹಾಗು ಉದ್ದೇಶವಾಗಿತ್ತು. ಅವರ ಕನಸನ್ನು ಪೂರ್ಣಗೊಳಿಸಲು ಮಹಾರಾಷ್ಟ್ರ ಕಂಕಣಬದ್ಧವಾಗಿದೆ, ಕರ್ನಾಟಕದ ಮರಾಠಿಗರೂ ಪಣ ತೊಡಬೇಕು. ಕರ್ನಾಟಕದಲ್ಲಿ ಮರಾಠಿ ಭಾಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಆಸೆ ಪೂರ್ಣಗೊಳಿಸುವ ಜವಾಬ್ದಾರಿ ಮಹಾರಾಷ್ಟ್ರದ ಮೇಲಿದೆ ಎಂದಿದ್ದಾರೆ.

ಇತ್ತ ಸರಕಾರ, ಬುದ್ಧಿಜೀವಿಗಳು ವೇದಾಂತಿಯಂತೆ ಮಾತನಾಡುತ್ತ “ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡಿಗರೇ, ಬೇರೆ ಬೇರೆ ಭಾಷೆ ಸಮುದಾಯಗಳ ಅಭುದ್ಯಯಕ್ಕೆ ಅಭಿವೃದ್ಧಿ ಪ್ರಾಧಿಕಾರ ಅವಶ್ಯ” ಎಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!