BengaluruBelagavi

ಈ ಬಾರಿಯೂ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿಲ್ಲ

ಬೆಂಗಳೂರು, ೨೦- ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿಯೂ ಸರಕಾರ ಬೆಳಗಾವಿಯಲ್ಲಿ ವಿಧಾನ ಮಂಡಳ ಅಧಿವೇಶನ ನಡೆಸುವದನ್ನು ಕೈಬಿಟ್ಟು ಬೆಂಗಳೂರಿನಲ್ಲಿಯೇ ಡಿ 5 ರಿಂದ 17 ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಿದೆ.

ಇಂದು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಹತ್ತೇ ನಿಮಿಷದಲ್ಲಿ ಕೊನೆಗೊಂಡ ಸಭೆಯಲ್ಲಿ ವಿಧಾನ ಮಂಡಳ ಅಧಿವೇಶನವಲ್ಲದೇ ಮರಾಠಾ, ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಗಳ ರಚನೆ ಕುರಿತು ಮಾತ್ರ ಚರ್ಚಿಸಲಾಯಿತು.

ಕೊನೆ ಪಕ್ಷ ವರುಷಕ್ಕೆ ಒಂದು ಸಲ ಅಧಿವೇಶನವನ್ನು ಸುವರ್ಣ ವಿಧಾನಸೌಧದಲ್ಲಿ ನಡೆಸಬೇಕೆಂದು ಈ ಮೊದಲು ತೀರ್ಮಾನಿಸಲಾಗಿತ್ತು, ಕಳೆದ ಎರಡು ಬಾರಿ ವಿವಿಧ ಕಾರಣಗಳಿಗೆ ಇಲ್ಲಿ ಅಧಿವೇಶನ ನಡೆಸಲಾಗಿರಲಿಲ್ಲ, ಈ ಬಾರಿ ಕೋವಿಡ್ ಸೋಂಕಿನ ಕಾರಣ ನಡೆಸದಿರಲು ತೀರ್ಮಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!