Bengaluru

ಮರಾಠಾ ಪ್ರಾಧಿಕಾರ ವಿರೋಧಿಸಿ ಮಹಾರಾಷ್ಟ್ರ ವಾಹನಗಳಿಗೆ ತಡೆ; ಚಾಲಕರ ಒಕ್ಕೂಟ ಎಚ್ಚರಿಕೆ

ಬೆಂಗಳೂರು, ನ.17 (ಯುಎನ್ಐ) ಮರಾಠರ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರ 50 ಕೋಟಿ ರೂ. ಅನುದಾನ ನೀಡಿರುವುದನ್ನು ಚಾಲಕರ ಒಕ್ಕೂಟಗಳು ತೀವ್ರವಾಗಿ ಖಂಡಿಸಿದ್ದು, ಇದಕ್ಕಾಗಿ ಎಚ್‍.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಚಾಲಕರಿಗೆ ಬಿಡುಗಡೆಯಾಗಿದ್ದ 60 ಕೋಟಿ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸ ಸದಾನಂದಸ್ವಾಮಿ ಆಕ್ರೋಶ ವ್ರಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಚ್‍.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಾಲಕರ ದಿನಾಚರಣೆ ಹಾಗೂ ಸಾರಥಿ ಸೂರಿಗೆ 60 ಕೋಟಿ ರೂ. ಅನುದಾನವನ್ನು ಬಜೆಟ್‍ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಚಾಲಕರಿಗೆ ನೀಡದೆ ವಂಚಿಸಿ ಇದೀಗ ಬಿ ಎಸ್. ಯಡಿಯೂರಪ್ಪ ಸರ್ಕಾರ ಮರಾಠರ ಅಭಿವೃದ್ಧಿಗೆ ಮುಂದಾಗಿದೆ. ಇದು ಖಂಡನೀಯ ಎಂದು ಸದಾನಂದಸ್ವಾಮಿ ತಿಳಿಸಿದ್ದಾರೆ.

ಲಾಕ್ ಡೌನ್ ನಂತರದಲ್ಲಿ ಟ್ಯಾಕ್ಸಿಗಳಲ್ಲಿ ಬಾಡಿಗೆ ಇಲ್ಲದೆ ಸಾವಿರಾರು ಚಾಲಕರು ಊರು ಬಿಟ್ಟಿದ್ದಾರೆ. ಇಎಂಐ ಕಟ್ಟಲಾಗದೆ ಫೈನಾನ್ಸ್ ಕಂಪನಿಕಗಳ ಕಿರುಕುಳಕ್ಕೆ ಬೇಸತ್ತು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಚಾಲಕರ ಪರ ನಿಂತು ಅವರ ಕಷ್ಟಗಳಿಗೆ ಸ್ಪಂಧಿಸಬೇಕಾದ ಸರ್ಕಾರ ಚಾಲಕರ ಹಣದಲ್ಲಿ ಬೇರೆಯವರ ಅಭಿವೃದ್ಧಿ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಾಠರಿಗೆ ನೀಡಿರುವ ಹಣವನ್ನು ಕೂಡಲೇ ಹಿಂಪಡೆಯಬೇಕು. ಈ ಕೂಡಲೇ ಮರಾಠರ ಅಭಿವೃದ್ಧಿಗೆ ಬಳಸುತ್ತಿರುವ ಚಾಲಕರ ಹಣವನ್ನು ವಾಪಾಸ್ ತೆಗೆದುಕೊಂಡು ನೊಂದ ಸಂಕಷ್ಟದಲ್ಲಿರುವ ಚಾಲಕರ ಪರ ಸರಕಾರ ನಿಲ್ಲಬೇಕು. ಇಲ್ಲವಾದರೆ ಬೃಹತ್ ಹೋರಾಟ ಹಮ್ಮಿಕೊಳ್ಳುತ್ತೇವೆ.

ಮಹಾರಾಷ್ಟ್ರದಿಂದ ಬರುವ ಎಲ್ಲಾ ಎಂ.ಎಚ್. ನೋಂದಣಿಯ ಮಹಾರಾಷ್ಟ್ರದ ವಾಹನಗಳು ಕರ್ನಾಟಕ ಪ್ರವೇಶಿಸದಂತೆ ತಡೆಹಿಡಿಯುತ್ತೇವೆ. ಮರಾಠರ ಅಭಿವೃದ್ಧಿಗೆ ನೀಡಿರುವ ಹಣವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಬೃಹತ್ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!