hubli

ಉತ್ತರ ಕರ್ನಾಟಕದಲ್ಲಿ ಉದ್ದಿಮೆಗಳ ಸ್ಥಾಪನೆ ಒತ್ತು: ಶೆಟ್ಟರ್

ಹುಬ್ಬಳ್ಳಿ, ನ.17 – ಕಳೆದ ಫೆಬ್ರವರಿಯಲ್ಲಿ ಹುಬ್ಬಳ್ಳಿ ಆಯೋಜಿಸಲಾದ ಇನ್ವೆಸ್ಟ್ ಕರ್ನಾಟಕ ಸಮಾವೇಶ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಸ್ಥಾಪಿಸಲು ಸಹಕಾರಿಯಾಗಿದೆ. ಎರಡನೇ ಹಂತದ ನಗರಗಳಲ್ಲಿ ಉದ್ದಿಮೆಗಳ ಸ್ಥಾಪನೆಗೆ ಸರ್ಕಾರ ಒತ್ತು ನೀಡಿದೆ ಎಂದು ಬೃಹತ್ ಮತ್ತು‌ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕೌಶಲ್ಯ ಕರ್ನಾಟಕ, ಜಿಲ್ಲಾ ಕೈಗಾರಿಕಾ ಕೇಂದ್ರ, ನಬಾರ್ಡ್, ಉದ್ಯೋಗಶೀಲ ಅಭಿವೃದ್ಧಿ ಕೇಂದ್ರ, ಕರ್ನಾಟಕ ಹಣಕಾಸು ನಿಗಮ, ಖಾದಿ ಗ್ರಾಮೋದ್ಯೋಗ ಹಾಗೂ ಎಸ್.ಎಸ್.ಕೆ. ಸಮಾಜ ಚಿಂತನ ಮಂಥನ ಸಮಿತಿ ವತಿಯುಂದ, ಕಮರಿಪೇಟೆ ಅನ್ನಪೂರ್ಣೇಶ್ವರಿ ಭವನದಲ್ಲಿ ಆಯೋಜಿಸಲಾದ ಒಂದು ದಿನದ ಉದ್ಯೋಗ ಮತ್ತು ಕೈಗಾರಿಕಾ ಚಿಂತನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಹುಬ್ಬಳ್ಳಿ ವಲಯದಲ್ಲಿ ಹಲವು ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ. ಐ.ಟಿ.ಬಿ.ಟಿ ಕಂಪನಿಗಳ ಸ್ಥಾಪನೆಯಿಂದಾಗಿ ಈ ಭಾಗದ ಯುವಕರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಲಿವೆ. 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಯುವಕರು ಕೌಶ್ಯಲ್ಯಗಳನ್ನು ಗಳಿಸಿಕೊಳ್ಳಬೇಕು. ಹೊಸದಾಗಿ ಉದ್ಯಮ ಸ್ಥಾಪನೆ ಮಂದಾದವರಿಗೆ ಸರ್ಕಾರ ಅಗತ್ಯ ಪ್ರೋತ್ಸಾಹಗಳನ್ನು ನೀಡುವುದು ಎಂದು ಹೇಳಿದರು.

ಎಸ್.ಎಸ್.ಕೆ. ಸಮಾಜ ವತಿಯಿಂದ ಆಕಾಶವಾಣಿ ಕಲಾವಿದ ಬಾಲಚಂದ್ರ ಸಾ ನಾಕೋಡ, ಮಾತೋಶ್ರೀ ವಿಜಯ ಮಾತ ಬುದ್ದಿ, ಭರತ ವರ್ಷ ಗುಜರಾತಿ ಇವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಪಾಲಿಕೆಯ ಮಾಜಿ ಮಾಹಾಪೌರ ಡಿ.ಕೆ.ಚೌವ್ಹಾಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!