Bengaluru

ಇಂದಿನಿಂದ ಪದವಿ ತರಗತಿ ಆರಂಭ; ಕೋವಿಡ್ ಮುಂಜಾಗ್ರತಾ ಕ್ರಮ ಪಾಲಿಸಿ -ಸುಧಾಕರ ಮನವಿ

ಬೆಂಗಳೂರು, ನ.17- ರಾಜ್ಯದಲ್ಲಿ ಇಂದಿನಿಂದ ಪದವಿ ಕಾಲೇಜುಗಳು ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜುಗಳ ಆಡಳಿತ ವರ್ಗದವರು, ವಿದ್ಯಾರ್ಥಿಗಳು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಮನವಿ ಮಾಡುತ್ತೇನೆ. ಮಾಸ್ಕ್ ಧರಿಸುವುದು, ಕೈಗಳ ಶುಚಿತ್ವ, ಭೌತಿಕ ಅಂತರ ಕಾಪಾಡಲು ಮರೆಯದಿರಿ. ಆತಂಕ ಬೇಡ, ಆದರೆ ಎಚ್ಚರಿಕೆ ಇರಲಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇಂದಿನಿಂದ ರಾಜ್ಯಾದ್ಯಂತ ಅಂತಿಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗಟಿವ್ ವರದಿ ಹಾಗೂ ಪೋಷಕರ ಒಪ್ಪಿಗೆ ಪತ್ರದೊಂದಿಗೆ ಬರುವಂತೆ ಸೂಚಿಸಲಾಗಿತ್ತು. ಅಂತಹವರನ್ನು ಮಾತ್ರ ತರಗತಿ ಯೊಳಗೆ ಬರಲು ಅವಕಾಶ ಕಲ್ಪಿಸಲಾಗಿದೆ.

ಡಿಪ್ಲೋಮಾ, ಇಂಜನೀಯರಿಂಗ್ ಹಾಗೂ ವಿವಿಧ ಪದವಿಯ ಅಂತಿಮ ವರ್ಷದ ತರಗತಿಗಳು ಮಾತ್ರ ಇಂದಿನಿಂದ ಆರಂಭಗೊಂಡಿವೆ. ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗುವುದು ಕಡ್ಡಾಯವಲ್ಲ. ಕಾಲೇಜುಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ಕಾಲೇಜಿಗೆ ಹಾಜರಾಗುವುದು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ಆಯ್ಕೆಗೆ ಬಿಟ್ಟಿದ್ದು. ಆಫ್ಲೈಿನ್ ಮತ್ತು ಆನ್ಲೈ್ನ್ ತರಗತಿಗಳು ಮುಂದುವರೆಯಲಿವೆ.

ಕಾಲೇಜಿಗೆ ಹಾಜರಾಗಿದ್ದರೆ ಆನ್ಲೈಿನ್ ತರಗತಿ ಮೂಲಕ ತಮ್ಮ ಅಭ್ಯಾಸ ಮುಂದುವರಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.
ಪದವಿ ಹಾಗೂ ಇಂಜನೀಯರಿಂಗ್ ಡಿಪ್ಲೋಮಾ ಕಾಲೇಜುಗಳ ಪ್ರಾಚಾರ್ಯರು ಸ್ಥಳೀಯ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಕಾಲೇಜುಗಳ ಕೊಠಡಿ, ಲ್ಯಾಬ್, ಗ್ರಂಥಾಲಯ, ಶೌಚಾಲಯ, ಕ್ಯಾಂಪಸ್ ಹೊರ ಆವರಣ ಮುಂಚಿತವಾಗಿ ಸ್ಯಾನಿಟೈಸ್ ಮಾಡಿಸಲಾಗಿದೆ. ಅಲ್ಲದೇ ಪ್ರತಿದಿನ ತರಗತಿ ಮುಗಿದ ನಂತರ ಸ್ಯಾನಿಟೈಸ್ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದೆ. ತಂಡ ತಂಡವಾಗಿ ಪ್ರಯೋಗಾಲಯ ತರಗತಿಗಳು ನಡೆಸಬೇಕು. ಪ್ರತಿ ತಂಡದ ಪ್ರಯೋಗಾಲಯ ತರಗತಿಗಳು ಮುಗಿದಾಗ ಸ್ಯಾನಿಟೈಸ್ ಮಾಡಿಸುವುದು ಕಡ್ಡಾಯವಾಗಿದೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ ಕನಿಷ್ಠ ಎರಡು ಮೀಟರ್ ಅಂತರ ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು. ತರಗತಿಗಳಲ್ಲಿ ಸಾಮಾಜಿಕ ಅಂತರಕಾಯ್ದುಕೊಳ್ಳಲು ಒಂದು ಕೊಠಡಿಯಲ್ಲಿ 20 ಜನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗಟಿವ್ ಬಂದ ಕುರಿತಂತೆ ಪರಿಶೀಲನೆಗೆ ಕಾಲೇಜ್ ಹಂತದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿಬೇಕು.

ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ನಿಂದ ಜ್ವರ ತಪಾಸಣೆಗೆ ಒಳಪಡಿಸಬೇಕು. ಮಾಸ್ಕ್ ಇಲ್ಲದೆ ಪ್ರವೇಶ ನೀಡಬಾರದು. ಕಾಲೇಜು ಪ್ರಾಚಾರ್ಯರು ಸೇರಿದಂತೆ ಬೋಧಕರು, ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಸಿಟಿವ್ ಬಂದವರಿಗೆ ಕಡ್ಡಾಯವಾಗಿ ನಿಯಮನುಸಾರ ಕಡ್ಡಾಯವಾಗಿ ರಜೆ ಮೇಲೆರ ಕಳುಹಿಸಬೇಕು. ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ಲೋಪವಾಗದಂತೆ ಗರಿಷ್ಠ ಎಚ್ಚರವಹಿಸುವಂತೆ ಕಾಲೇಜು ಪ್ರಾಚಾರ್ಯರರಿಗೆ ಸೂಚನೆ ನೀಡಲಾಗಿದೆ.

ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ನಿಲಯಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈವರೆಗೂ ಪರೀಕ್ಷೆಮಾಡಿಸಿಕೊಳ್ಳದ ವಿದ್ಯಾರ್ಥಿಗಳು ಕಡ್ಡಾಯವಾಗಿ ಆರ್.ಟಿ.ಪಿ.ಆರ್. ಲ್ಯಾಬ್ನವಲ್ಲಿ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ಪಾಲಕರ ಒಪ್ಪಿಗೆ ಪತ್ರತರಬೇಕು. ಎಲ್ಲ ವಸತಿ ನಿಲಯಗಳನ್ನು ಈಗಾಗಲೇ ಸ್ಯಾನಿಟೈಸ್ ಮಾಡಿಸಲಾಗಿದೆ ಎಂದು ಸೂಚಿಸಲಾಗಿದೆ.

ಕಾಲೇಜಿಗೆ ಬರುವ 72 ಗಂಟೆ ಮುಂಚಿತವಾಗಿ ಆರ್.ಟಿ.ಪಿ.ಸಿ.ಆರ್. ಲ್ಯಾಬ್ಗಳಲ್ಲಿ ಪರೀಕ್ಷೆ ಮಾಡಿಕೊಂಡು ನೆಗಟಿವ್ ಬಂದ ಕುರಿತಂತೆ ಪ್ರಮಾಣಪತ್ರ ತರಬೇಕು ಹಾಗೂ ಕಾಲೇಜಿಗೆ ಬರುವ ತಂದೆ-ತಾಯಿ ಅಥವಾ ಪೋಷಕರಿಂದ ತರಗತಿಗೆ ಹಾಜರಾಗುವ ಕುರಿತಂತೆ ಒಪ್ಪಿಗೆ, ಮುಚ್ಚಳಿಕೆ ಪ್ರಮಾಣಪತ್ರ ಕಾಲೇಜಿಗೆ ಸಲ್ಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್, ಕುಡಿಯುವ ನೀರು, ಉಪಹಾರ ಅಥವಾ ಊಟವನ್ನು ವಿದ್ಯಾರ್ಥಿಗಳೇ ಮನೆಯಿಂದ ತರಬೇಕು. ಕಾಲೇಜ್ ಆವರಣದಲ್ಲಿ ವಿನಾಕರಣ ಯಾವುದೇ ವಸ್ತುಗಳನ್ನು ಮುಟ್ಟಬಾರದು. ಕನಿಷ್ಠ ಎರಡು ಮೀಟರ್ ಭೌತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಗುಂಪು ಸೇರಬಾರದು, ಕೆಮ್ಮು, ನೆಗಡಿ ಮತ್ತು ಜ್ವರದ ಸೂಚನೆಗಳಿದ್ದರೆ ಕಾಲೇಜಿನ ಕಚೇರಿಗೆ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳು ಹಾಗೂ ಕಾಲೇಜ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಡಿಕೊಳ್ಳಲು ಸೂಚಿಸಲಾಗಿದೆ,

Related Articles

Leave a Reply

Your email address will not be published. Required fields are marked *

Back to top button
error: Content is protected !!