Belagavi

ಕಾಣೆಯಾಗಿದ್ದ ಇಬ್ಬರು ಯುವಕರ ಶವ ಅಸೋಗಾ ಬಳಿ ಪತ್ತೆ

ಬೆಳಗಾವಿ, ೧೬- ಮೂರು ದಿನದ ಹಿಂದೆ ಪಿಕ್ನಿಕ್ ಮಾಡಲು ಅಸೋಗಾಗೆ ತೆರಳಿ ಕಾಣೆಯಾಗಿದ್ದ ಇಬ್ಬರು ಹದಿಹರೆಯದ ಯುವಕರ ಶವಗಳು ಇಂದು ಸೋಮವಾರ ಖಾನಾಪೂರದ ಅಸೋಗಾ ಬಳಿ ಇರುವ ಮಲಪ್ರಭಾ ನದಿಯ ಉಗಮ ಸ್ಥಾನವಾದ ಹಾಲತ್ರಿ ಹಳ್ಳದಲ್ಲಿ ಪತ್ತೆಯಾಗಿವೆ.

ಮೃತರನ್ನು ಖಾನಾಪುರದ 16 ವರುಷದ ಉಮರ ಖಲೀಫಾ ಹಾಗು ಅರಫಾತ ಅರಕಾಟಿ ಎಂದು ಗುರುತಿಸಲಾಗಿದೆ.

ಒಟ್ಟು ಮೂರು ಜನ ಯುವಕರು ಪಿಕನಿಕ್ ಗೆಂದು ಖಾನಾಪೂರದಿಂದ ಅಸೋಗಾಗೆ ಹೊರಟಿದ್ದರು. ಆದರೆ ಓರ್ವ ಯುವಕನ ಬೈಕ್ ನಲ್ಲಿ ಪೆಟ್ರೋಲ್ ಮುಗಿದ ಕಾರಣ ಆತ ಮರಳಿ ಬಂದಿದ್ದ.

ನಾಪತ್ತೆಯಾಗಿದ್ದ ಯುವಕರ ಪತ್ತೆಗೆ ಅವರ ಮೊಬೈಲ್ ಗಳಿಗೆ ಕರೆ ಮಾಡಿದರೆ ರಿಂಗ್ ಆಗುತ್ತಿತ್ತು. ಅವರ ನೆಟವಕ೯ ಶೇಡಗಾಳಿ ತೋರಿಸಿದ್ದರಿಂದ ಖಾನಾಪೂರ ಪೋಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.

ನಿನ್ನೆ ಭಾನುವಾರ ಪೋಲೀಸರಿಗೆ ಯುವಕರು ಧರಿಸಿದ್ದ ಬಟ್ಟೆ ಮತ್ತು ಮೊಬೈಲ್ ಫೋನ್ ಗಳು ಹಾಲತ್ರಿ ಹಳ್ಳದ ಬಳಿ ಪತ್ತೆಯಾಗಿದ್ದವು.

ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಯುವಕರು ಪತ್ತೆಯಾಗಿರಲಿಲ್ಲ, ಇಂದು ಬೆಳಿಗ್ಗೆ ಪತ್ತೆ ಕಾರ್ಯ ಮುಂದುವರಿಸಿದಾಗ ಯುವಕರ ಶವಗಳು ಪತ್ತೆಯಾಗಿವೆ. ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!