Belagavi

ಲಕ್ಷಾಂತರ ರೂ. ಕಳ್ಳತನ ಮಾಡಿದ್ದ ಮನೆಗೆಲಸದ ಇಬ್ಬರು ಕಳ್ಳಿಯರ ಬಂಧನ

ಬೆಳಗಾವಿ, ೧೫- ತಾವು ಕೆಲಸ ಮಾಡುತ್ತಿದ್ದ ಮನೆಯಲ್ಲಿನ ನಾಲ್ಕೂವರೆ ಲಕ್ಷ ರೂಪಾಯಿ ದೋಚಿದ್ದ ಇಬ್ಬರು ಮಹಿಳಾ ಮನೆಗೆಲಸದವರನ್ನು ದೂರು ದಾಖಲಾದ ಕೇವಲ 6 ಗಂಟೆಗಳಲ್ಲಿ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.

ಕುವೆಂಪು ನಗರದ ಓಂಕಾರ ಕಾಲೋನಿಯ 8ನೇ ಕ್ರಾಸ್‍ನ ಆಝಾದ್ ಕೋ-ಆಫ್ ಹೌಸಿಂಗ್ ಸೊಸೈಟಿಯ ಯೋಗೇಶ ಭರತ ಛಾಬಡಾ ಎಂಬುವರು ಭಾತಕಾಂಡೆ ಗಲ್ಲಿಯಲ್ಲಿ ಪ್ಲೈವುಡ್ ಅಂಗಡಿ ಹೊಂದಿದ್ದಾರೆ. ವ್ಯಾಪಾರ ಮಾಡಿದ್ದ 5,50,000 ರೂಪಾಯಿ ಹಣವನ್ನು ನವಂಬರ್ 11ರಂದು ಮನೆಯ ಕಪಾಟಿನಲ್ಲಿ ತಂದು ಇಟ್ಟಿದ್ದರು. ಬಳಿಕ ಮಾರನೇ ದಿನ ಬ್ಯಾಂಕಿಗೆ ಹಣ ಜಮಾ ಮಾಡಲು ಕಪಾಟು ತೆರೆದಾಗ 5,50,000 ರೂಪಾಯಿ ಹಣದಲ್ಲಿ ಕೇವಲ 1 ಲಕ್ಷ ರೂಪಾಯಿ ಹಣ ಮಾತ್ರ ಇದ್ದವು. ಇದರಿಂದ ಗಾಬರಿಯಾದ ಛಾಬಡಾ ಕುಟುಂಬ ಮನೆಯ ಎಲ್ಲರನ್ನು ವಿಚಾರಿಸಿದ್ದಾರೆ.

ನಂತರ ನವಂಬರ್ 15 ರಂದು ಎಪಿಎಂಸಿ ಠಾಣೆಗೆ ತೆರಳಿ ದೂರು ನೀಡಿದ್ದರು. ಇನ್ಸಪೆಕ್ಟರ್ ಜಾವೇದ ಮುಷಾಪುರೆ ನೇತೃತ್ವದ ತಂಡ ಕಳ್ಳತನ ಆಗಿರುವ ಮನೆಯ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಮನೆ ಕೆಲಸದವರನ್ನು ವಿಚಾರಣೆಗೆ ಒಳಪಡಿಸಿದಾಗ ಮನೆಯಲ್ಲಿ ಇಟ್ಟಿದ್ದ 5.50 ಲಕ್ಷ ರೂಪಾಯಿ ಹಣದಲ್ಲಿ 4.50 ಲಕ್ಷ ಹಣವನ್ನು ಲಪಟಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮನೆ ಕೆಲಸದವರಾದ ಬಂಜಾರಾ ಕಾಲನಿ 1ನೇ ಕ್ರಾಸ್‍ನ ಮರಿಯಮ್ಮ ಬಾಬು ಪರಶಿಪೋಗು ಮತ್ತು ಜನತಾ ಕಾಲನಿ ಬಾಚಿಯ ಅನಿತಾ ಯಲ್ಲಪ್ಪ ಕಾಂಬಳೆ ಎಂದು ಗುರುತಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!