Gokak

ಗೋಕಾಕ ಬಳಿ ವಾಹನಗಳ ಡಿಕ್ಕಿ, ನಾಲ್ವರ ಸಾವು

ಗೋಕಾಕ : ಪ್ರಯಾಣಿಕರ ಟಾಟಾ ಎಸ್ ಮತ್ತು ಕಾರು ಮಧ್ಯ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ತಾಲೂಕಿನ ಸಂಕೇಶ್ವರ – ನರಗುಂದ ರಾಜ್ಯ ಹೆದ್ದಾರಿ ಮಮದಾಪೂರ ಕ್ರಾಸ್ ಬಳಿ ಸಂಭವಿಸಿದೆ.

ಟಾಟಾ ಎಸ್ ಹಾಗೂ ಇಂಡಿಕಾ ಕಾರ್ ಮಧ್ಯ ಡಿಕ್ಕಿ ಸಂಭವಿಸಿ ಓರ್ವ ಯುವಕ , ಇಬ್ಬರು ಮಹಿಳೆಯರು , ಒಂದು ಹೆಣ್ಣುಮಗು ದುರ್ಘಟನೆಯಲ್ಲಿ ಅಸುನೀಗಿದ್ದು, ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ. ಮೃತಪಟ್ಟ ಮತ್ತು ಗಾಯಗೊಂಡವರು ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದವರು ಎಂದು ಗುರುತಿಸಲಾಗಿದೆ, ಇವರೆಲ್ಲರೂ ಟಾಟಾ ಎಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.

ಗೋಕಾಕ ಗ್ರಾಮೀಣ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

Back to top button
error: Content is protected !!