New Delhi

ಭಾರತವನ್ನು ಪರೀಕ್ಷಿಸುವ ಪ್ರಯತ್ನ ಬೇಡ: ಪ್ರಧಾನಿ ಎಚ್ಚರಿಕೆ

ನವದೆಹಲಿ, ನ 14 (ಯುಎನ್‍ಐ) ಅರ್ಥಮಾಡಿಕೊಳ್ಳುವುದರಲ್ಲಿ ಹಾಗೂ ವಿವರಿಸುವದರಲ್ಲಿ ಭಾರತಕ್ಕೆ ನಂಬಿಕೆ ಇದೆ. ಆದರೆ ನಮ್ಮನ್ನು ಪರೀಕ್ಷಿಸುವ ಪ್ರಯತ್ನವಿದ್ದಲ್ಲಿ, ಪ್ರತಿಕ್ರಿಯೆ ಕೂಡ ಅಷ್ಟೇ ತೀವ್ರವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರುಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿಯನ್ನು ಕಳೆಯುವ ಸಂಪ್ರದಾಯವನ್ನು ಮುಂದುವರೆಸಿದ ಮೋದಿಯವರು ಶನಿವಾರ ಪ್ರಸಿದ್ಧ ಗಡಿ ಪೋಸ್ಟ್ ಲಾಂಗ್‌ವಾಲಾಗೆ ಭೇಟಿ ನೀಡಿದ್ದರು.

ದೀಪಗಳ ಹಬ್ಬದಂದು ಅವರನ್ನು ಸ್ವಾಗತಿಸಿದ್ದ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿ, ಹಿಮದಿಂದ ಆವೃತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಯಲ್ಲಿ ಸೈನಿಕರೊಂದಿಗೆ ಇರುವಾಗ ಮಾತ್ರ ತಮ್ಮ ದೀಪಾವಳಿ ಪೂರ್ಣಗೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು.

ದೇಶವಾಸಿಗಳು ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿರುವುದಗಿ ತಿಳಿಸಿರುವ ಪ್ರಧಾನಿ, 130 ಕೋಟಿ ಭಾರತೀಯರು ಸೇನಾಪಡೆಗಳೊಂದಿಗೆ ಬಲವಾಗಿ ನಿಂತಿದ್ದಾರೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!