Washington

306ಕ್ಕೇರಿದ ಬೈಡನ್ ಎಲಕ್ಟೋರಲ್ ಮತಗಳ ಸಂಖ್ಯೆ

ವಾಷಿಂಗ್ಟನ್, ನ 14(ಯುಎನ್ಐ) ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಲಭಿಸಿರುವ ಎಲಕ್ಟೋರಲ್ ಮತಗಳು ಮತ್ತಷ್ಟು ಏರಿಕೆಯಾಗಿದೆ.

ಜಾರ್ಜಿಯಾ, ಆರಿಜೋನಾ ರಾಜ್ಯಗಳಲ್ಲಿ ಜಯ ಸಾಧಿಸಿರುವುದರಿಂದ ಬೈಡನ್ ಅವರಿಗೆ ಲಭಿಸಿರುವ ಎಲಕ್ಟೋರಲ್ ಮತಗಳ ಸಂಖ್ಯೆ 306 ಕ್ಕೆ ಏರಿಕೆಯಾಗಿದೆ. ಚುನಾವಣಾ ಪೈಪೋಟಿಯಲ್ಲಿ ಹಿಂದುಳಿದಿರುವ ಅಧ್ಯಕ್ಷ ಡೋನಾಲಡ್ ಟ್ರಂಪ್ 232 ಮತ ಪಡೆದಿದ್ದಾರೆ. ಅಮೆರಿಕಾದ ಒಟ್ಟು 50 ರಾಜ್ಯಗಳ ಪೈಕಿ, ಈಗಾಗಲೇ 48 ರಾಜ್ಯಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಅಂತಿಮವಾಗಿ, ಜಾರ್ಜಿಯಾ, ಆರಿಜೋನಾದ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

ಅರಿಜೋನಾದಲ್ಲಿ 11 ಚುನಾವಣಾ ಮತಗಳಿದ್ದರೆ, ಜಾರ್ಜಿಯಾದಲ್ಲಿ 16 ಮತಗಳಿವೆ. ಇಲ್ಲಿ ಬೈಡೆನ್ ಗೆಲುವುಸಾಧಿಸಿರುವುದರಿಂದ ಅವರ ಪಡೆದ ಪ್ರತಿನಿಧಿಗಳ ಸಂಖ್ಯೆ 306 ತಲುಪಿದೆ. ಇನ್ನೂ ಜಾರ್ಜಿಯಾದಲ್ಲಿ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ನಂತರ ಜಯ ಸಾಧಿಸಿದ ಡೆಮಾಕ್ರಟಿಕ್ ಅಭ್ಯರ್ಥಿ ಎಂಬ ದಾಖಲೆಯನ್ನು ಬೈಡನ್ ಹೊಂದಿದ್ದಾರೆ. 1992ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕ್ಲಿಂಟನ್ ಕೊನೆಯ ಬಾರಿಗೆ ಗೆಲುವು ಸಾಧಿಸಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!