New Delhi

ದೇಶದಲ್ಲಿ ಕೋವಿಡ್‍-19ನ ಹೊಸ 44,684 ಪ್ರಕರಣಗಳು ವರದಿ

ನವದೆಹಲಿ, ನ 14 (ಯುಎನ್‌ಐ) ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‍-19ರ 44,684 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 87,73, 479 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿ ತಿಳಿಸಿದೆ.

ಕಳೆದ ಒಂದು ದಿನದಲ್ಲಿ ವೈರಸ್ ಸೋಂಕಿನಿಂದ 520 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುವುದರೊಂದಿಗೆ ಈವರೆಗೆ ಒಟ್ಟು ಸಾವಿನ ಸಂಖ್ಯೆ 1,29,188 ಕ್ಕೆ ಏರಿದೆ.

ಸಕ್ರಿಯ ಪ್ರಕರಣಗಳು ಇದೇ ಅವಧಿಯಲ್ಲಿ 3,828 ರಷ್ಟು ಕುಸಿದಿದ್ದು, ಸದ್ಯ ದೇಶದಲ್ಲಿ 4,80,719 ಸಕ್ರಿಯ ಪ್ರಕರಣಗಳಿವೆ ಸರ್ಕಾರದ ಮಾಹಿತಿ ತಿಳಿಸಿದೆ.

ಶುಕ್ರವಾರದಿಂದ 47, 992 ಸೋಂಕಿತರು ಗುಣಮುಖರಾಗುವುದರೊಂದಿಗೆ ಈವರೆಗೆ ಸೋಂಕಿನಿಂದ ಚೇತರಿಕೆಗೊಂಡವರ 81,63,572 ಕ್ಕೆ ಏರಿದೆ.

ಶೇಕಡಾವಾರು ಪ್ರಮಾಣದಲ್ಲಿ, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 5.48, ಚೇತರಿಕೆ ಪ್ರಮಾಣ ಶೇ 93.05 ಮತ್ತು ಸಾವಿನ ಪ್ರಮಾಣ ಶೇ 1.47 ರಷ್ಟಿದೆ ಎಂದು ಸರ್ಕಾರದ ಅಂಕಿ- ಅಂಶಗಳು ತಿಳಿಸಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿಯಂತೆ, ಈವರೆಗೆ ದೇಶದಾದ್ಯಂತ ಒಟ್ಟು 12,40,31,230 ಕೋವಿಡ್ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದೆರಡು ದಿನಗಳಿಂದ ಪ್ರಕರಣಗಳ ಸಂಖ್ಯೆ 7 ಸಾವಿರಕ್ಕೂ ಮೀರಿದ್ದು, ಇದು ವೈರಸ್ ಸೋಂಕಿನ ಮೂರನೇ ಅಲೆಯನ್ನು ಸೂಚಿಸುತ್ತಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!