Bengaluru

ರಾಗಿಣಿ ಕಾನೂನು ಹೋರಾಟಕ್ಕೆ ಕಾರ್ ಮಾರಾಟಕ್ಕಿಟ್ಟಿರುವ ಪಾಲಕರು

ಬೆಂಗಳೂರು, ೧೨- ಕೆಲವೇ ದಿನಗಳ ಹಿಂದೆ ಎರಡು ಕೋಟಿ ರೂಪಾಯಿಗೆ ತಮ್ಮದೊಂದು ಫ್ಲಾಟ್ ಮಾರಾಟಕ್ಕಿಟ್ಟಿದ್ದ ಡ್ರಗ್ಸ್ ಕೇಸ್ ನಲ್ಲಿ ಬಂಧಿತಳಾಗಿರುವ ನಟಿ ರಾಗಿಣಿ ಅವರ ಪಾಲಕರು ಇದೀಗ ತಮ್ಮ ಕಾರ್ ಗಳನ್ನೂ ಮಾರಾಟಕ್ಕಿಟ್ಟಿದ್ದಾರೆ.

ಡ್ರಗ್ಸ್​ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ಜಾಮೀನು ಅರ್ಜಿಯನ್ನು ಹೈಕೋರ್ಟ್​ ಇತ್ತೀಚಿಗೆ ವಜಾ ಆಗಿತ್ತು. ಮಗಳನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ರಾಗಿಣಿ ಪೋಷಕರು ಕಾನೂನು ಹೋರಾಟ ನಡೆಸುತ್ತಿದ್ದು, ಆರ್ಥಿಕ ಸಂಕಷ್ಟ ಹಿನ್ನೆಲೆ ಯಲಹಂಕದ ತಮ್ಮ ಫ್ಲಾಟನ್ನು ಎರಡು ಕೋಟಿ ರುಪಾಯಿಗೆ ಪ್ಲಾಟ್ ಮಾರಾಟಕ್ಕಿಟ್ಟಿದ್ದರು. ಆದರೆ ಅದು ಮಾರಾಟವಾಗದ್ದರಿಂದ ತಮ್ಮ ಎರಡು ಕಾರುಗಳನ್ನು ಮಾರಲು ಮುಂದಾಗಿದ್ದಾರೆ.

“ನಮ್ಮ ಎರಡು ಕಾರ್ ಗಳು ಮಾರಾಟಕ್ಕಿವೆ. ಇನ್ನೊವಾ ಕಾರಿಗೆ 9 ಲಕ್ಷ ರೂಪಾಯಿ ಹಾಗೂ ಎಸ್​ಎಕ್ಸ್​​ 4 ಕಾರಿಗೆ 3 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿದ್ದೇವೆ. ಆಸಕ್ತಿಯಿದ್ದರೆ ಸಂಪರ್ಕಿಸಿ” ಎಂದು ತಮ್ಮ ಪರಿಚಯಸ್ಥರಿಗೆ, ವಾಟ್ಸ್​ಪ್ ಗ್ರೂಪ್​ಗಳಿಗೆ ಫಾರ್ವರ್ಡ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!