Entertainment

ಸಿನಿಮಾ ವೀಕ್ಷಣೆಯ ವ್ಯವಸ್ಥೆ ಬದಲಾದೀತು: ಪ್ರಕಾಶ ಬೆಳವಡಿ

ಬೆಂಗಳೂರು, ನ 12- ಜಾಗತಿಕವಾಗಿ ಕಾಡುತ್ತಿರುವ ಕೊರೋನಾದಿಂದಾಗಿ ಜನ ಜೀವನದಲ್ಲಿ, ಸಾಮಾಜಿಕ ವ್ಯವಸ್ಥೆಗಳಲ್ಲಿ, ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದು ಚಿತ್ರ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು, ಥಿಯೇಟರ್ ಮಾಲೀಕರನ್ನು ಕಂಗೆಡಿಸಿದ್ದು, ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಈ ಕುರಿತು ‘ಅರಿಷಡ್ವರ್ಗ’ ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟ, ರಂಗಭೂಮಿ ಕಲಾವಿದ ಪ್ರಕಾಶ ಬೆಳವಡಿ, ಮುಂದೆ ಚಿತ್ರ ವೀಕ್ಷಿಸುವ ವ್ಯವಸ್ಥೆ ಬದಲಾಗಬಹುದು ಎಂದಿದ್ದಾರೆ.

“ಸಾಮೂಹಿಕವಾಗಿ ಚಿತ್ರ ವೀಕ್ಷಣೆಯಲ್ಲಿ ಏನೆಲ್ಲಾ ಮಾರ್ಪಾಟಾದೀತು? ಬಯಲಿನಲ್ಲಿ ಕುಳಿತು ವೀಕ್ಷಿಸುವ ಕಾಲ ಬರಬಹುದೇ? ಥಿಯೇಟರ್ ಗಳು ಮಾಯವಾಗುತ್ತವೆಯೇ ಎನಿಸುತ್ತಿದೆ” ಎಂದರು.

“ಕೊರೋನಾ ಕಡಿಮೆಯಾದರೂ ಮತ್ತೊಂದು ಸಾಂಕ್ರಾಮಿಕ ಎದುರಾಗುವುದಿಲ್ಲ ಎಂದು ಹೇಳಲಾಗದು. ಆದರೆ ಕೊರೋನಾ ಕಾರಣದಿಂದ ಕೆಲವರು ಚಿತ್ರಮಂದಿರಗಳಿಗೆ ಬರಲು ಹೆದರುತ್ತಿದ್ದರೆ, ಮತ್ತೆ ಕೆಲವರಿಗೆ ಮನೆಯಲ್ಲೇ ಕುಳಿತು ಚಿತ್ರ ವೀಕ್ಷಿಸುವುದು ರೂಢಿಯಾಗಿದೆ” ಎಂದು ಹೇಳಿದರು.

ಕಳೆದ 2001ರಲ್ಲಿಯೇ ಮುಂದಿನ 10 ವರ್ಷದಲ್ಲಿ ಸೆಲ್ಯೂಲಾಡ್ ಇರುವುದಿಲ್ಲ ಎಂದು ಹೇಳಿದ್ದೆ. ಆಗ ಅನೇಕರು ನಕ್ಕು ಗೇಲಿ ಮಾಡಿದ್ದರು. ಆದರೆ 2 ವರ್ಷಗಳಲ್ಲಿಯೇ ಬದಲಾಗಿತ್ತು” ಎಂದರು.

ಬದಲಾವಣೆ ಜಗದ ನಿಯಮ. ಆದಾಗ್ಯೂ ‘ಅರಿಷಡ್ವರ್ಗ’ ದಂತಹ ಉತ್ತಮ ಚಲನಚಿತ್ರವನ್ನು ಎಲ್ಲರೂ ವೀಕ್ಷಿಸಲು ಸಾಧ್ಯವಾದರೆ ಬಹಳ ಒಳ್ಳೆಯದು ಎಂದು ಪ್ರಕಾಶ ಬೆಳವಡಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!