Sports

ದೇವದತ್‌ ಪಡಿಕ್ಕಲ್‌-ರಾಹುಲ್‌ ತೆವಾಟಿಯ ಆಟಕ್ಕೆ ಮನಸೋತ ಬ್ರೆಟ್‌ ಲೀ

ನವದೆಹಲಿ, ನ 12 (ಯುಎನ್‌ಐ) ಇತ್ತೀಚೆಗೆ ಮುಕ್ತಾಯವಾದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಸೇರಿದಂತೆ ಇಬ್ಬರು ದೇಶಿ ಆಟಗಾರರು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಗಮನ ಸೆಳೆದಿದ್ದಾರೆ. ಈ ಬಗ್ಗೆ ಮಾಜಿ ಸ್ಟಾರ್‌ ವೇಗಿಯೇ ಬಹಿರಂಗಪಡಿಸಿದ್ದಾರೆ.

2020ರ ಐಪಿಎಲ್‌ ಟೂರ್ನಿಯಲ್ಲಿ ಹಲವು ಗಮನಾರ್ಹ ಪ್ರದರ್ಶನಗಳು ಮೂಡಿಬಂದಿವೆ. ಕೆ.ಎಲ್‌ ರಾಹುಲ್, ಜಸ್ಪ್ರಿತ್‌ ಬುಮ್ರಾ, ಕಗಿಸೊ ರಬಾಡ, ಶಿಖರ್‌ ಧವನ್‌, ಬೆನ್ ಸ್ಟೋಕ್ಸ್ ಹಾಗೂ ಪ್ಯಾಟ್‌ ಕಮಿನ್ಸ್ ಅವರಂಥ ಹಲವು ಅಂತಾರಾಷ್ಟ್ರೀಯ ಆಟಗಾರರಿಂದ ಅದ್ಭುತ ಪ್ರದರ್ಶನ ಹೊರಬಂದಿದೆ. ಇದರ ಜತೆ ಕೆಲ ದೇಶಿ ಆಟಗಾರರು ಕೂಡ ಮಿಂಚಿನ ಪ್ರದರ್ಶನವನ್ನು ತೋರಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾದಾಗಿನಿಂದಲೂ ಹಲವಾರು ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯ ಮಾಡಿದೆ. ಅದರಂತೆ 2020ರ ಆವೃತ್ತಿಯಲ್ಲಿ ಹಲವು ಪ್ರತಿಭೆಗಳನ್ನು ಪರಿಚಯ ಮಾಡಿಕೊಟ್ಟಿದೆ. ಅದರಂತೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್‌ ತೆವಾಟಿಯಾ ಬ್ರೆಟ್‌ ಲೀಗ್‌ ಮನಸನ್ನು ಗೆದ್ದಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಬ್ರೆಟ್‌ ಲೀ, “ಇದು ಅದ್ಭುತವಾಗಿದೆ. ಯಾವುದೇ ಅಭಿಮಾನಿಗಳಿಲ್ಲದೆ ಇದು ಕಷ್ಟಕರವಾಗಿದೆ, ಆದರೆ ನನಗೆ ಈ ಋತುವಿನ ಉತ್ತಮ ಭಾಗವೆಂದರೆ ಯುವ ಭಾರತೀಯ ಆಟಗಾರರು. ದೇವದತ್‌ ಪಡಿಕ್ಕಲ್‌ ಹಾಗೂ ರಾಹುಲ್‌ ತೆವಾಟಿತಾ.. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಅತ್ಯುತ್ತಮ ಕ್ರಿಕೆಟ್‌ ಆಡಿರುವುದನ್ನು ನೋಡಿರಬಹುದು, ಆದರೆ ವೇಗದ ಬೌಲರ್‌ಗಳ ಬಗ್ಗೆ ಹೇಳುತ್ತೇನೆ,” ಎಂದು ಹೇಳಿದರು.

2020ರ ಐಪಿಎಲ್‌ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ದೇವದತ್‌ ಪಡಿಕ್ಕಲ್‌ ಮುಡಿಗೇರಿಸಿಕೊಂಡರು. ಮತ್ತೊಂದು ಅಸ್ಥಿರ ಪ್ರದರ್ಶನ ತೋರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಪ್ರಕಾಶಮಾನವಾದ ತಾಣಗಳಲ್ಲಿಇದು ಒಂದಾಗಿದೆ. ಆರ್‌ಸಿಬಿ ಪರ ಆರಂಭಿಕನಾಗಿ ಕಣಕ್ಕೆ ಇಳಿದ ಪಡಿಕ್ಕಲ್‌ 15 ಪಂದ್ಯಗಳಿಂದ 31.53ರ ಸರಾಸರಿಯಲ್ಲಿ ಐದು ಅರ್ಧಶತಕಗಳೊಂದಿಗೆ 473 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಬೆಂಗಳೂರು ಯುವ ಪ್ರತಿಭೆ ವಿಶ್ವ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದಾರೆ.

ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್ ಪರ ಆಲ್‌ರೌಂಡರ್‌ ಪ್ರದರ್ಶನದಿಂದ ರಾಹುಲ್‌ ತೆವಾಟಿಯಾ ಅಭಿಮಾನಿಗಳು ಹಾಗೂ ಕ್ರಿಕೆಟ್‌ ಪಂಡಿತರ ಗಮನ ಸೆಳೆದಿದ್ದಾರೆ. ರಾಜಸ್ಥಾನ್‌ ರಾಯಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಆದರೆ, ಸ್ಟೀವನ್‌ ಸ್ಮಿತ್‌, ರಾಹುಲ್‌ ತೆವಾಟಿಯಾ ಅವರನ್ನು ಗುಣಗಾನ ಮಾಡಿದ್ದರು. 14 ಪಂದ್ಯಗಳಿಂದ ಅವರು 255 ರನ್‌ಗಳು ಹಾಗೂ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!