Patna

ಜನ ಮಹಾ ಮೈತ್ರಿ ಪರ ಜನರ ತೀರ್ಪು, ಎನ್ ಡಿ ಎ ಪರ ಫಲಿತಾಂಶ ಘೋಷಿಸಿದ ಆಯೋಗ

ಪಾಟ್ನಾ, ನ 12- ಬಿಹಾರ ಚುನಾವಣೆಗಳ ಬಗ್ಗೆ ಮಹಾ ಮೈತ್ರಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ ಗುರುವಾರ ಗಂಭೀರ ಹೇಳಿಕೆ ನೀಡಿದ್ದಾರೆ.

ಬಿಹಾರ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಜನರು ಮಹಾಘಟ ಬಂಧನ ಪರವಾಗಿ ತೀರ್ಪು ನೀಡಿದ್ದಾರೆ. ಆದರೆ ಚುನಾವಣಾ ಆಯೋಗ ಎನ್‌ಡಿಎ ಪರವಾಗಿ ಫಲಿತಾಂಶ ಪ್ರಕಟಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದ್ದಾರೆ.

ಹೀಗೆ ನಡೆಯುತ್ತಿರುವುದು ಇದು ಮೊದಲ ಬಾರಿ ಅಲ್ಲ. 2015 ರಲ್ಲೂ ಕೂಡ ಹೆಚ್ಚು ಕಡಿಮೆ ಇಂತಹದೇ ತೀರ್ಪು ಬಂದಿತ್ತು. ಜನರು ಭಾರಿ ಬಹುಮತದಿಂದ ಮಹಾ ಮೈತ್ರಿ ಕೂಟಕ್ಕೆ ಪಟ್ಟ ಕಟ್ಟಿದ್ದಾರೆ. ಆದರೆ, ಅಧಿಕಾರಕ್ಕಾಗಿ ಬಿಜೆಪಿ ಅಡ್ಡ ದಾರಿ ಹುಡುಕಿಕೊಂಡು, ಜನಾದೇಶದ ವಿರುದ್ದ ವ್ಯವಹರಿಸಿದೆ ಎಂದು ತೇಜಸ್ವಿ ಯಾದವ ಹೇಳಿದರು.

ಚುನಾವಣೆಯಲ್ಲಿ ಮಹಾ ಮೈತ್ರಿ ಕೂಟ 119 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಚುನಾವಣಾ ಆಯೋಗ ಮೊದಲು ಘೋಷಿಸಿತ್ತು ಎಂದು ಆರ್ ಜೆ ಡಿ ಆರೋಪಿಸಿದೆ . ಆದರೆ ಬಹಳಷ್ಟು ಮಂದಿ ಅಭ್ಯರ್ಥಿಗಳು ಅತ್ಯಂತ ಕಡಿಮೆ ಮತಗಳಿಂದ ಗೆದ್ದಿರುವುದು ಈ ಆರೋಪಗಳಿಗೆ ಬಲ ನೀಡಿದೆ. ತಮ್ಮ ಅಭ್ಯರ್ಥಿಗಳು ಗೆಲ್ಲದಿರುವುದಕ್ಕೆ ಕಾರಣಗಳು ಏನು ಎಂಬ ಬಗ್ಗೆ ಆರ್‌ಜೆಡಿ ಕೆಲ ಪುರಾವೆಗಳನ್ನು ತೋರಿಸಲು ಪ್ರಯತ್ನಿಸುತ್ತಿದೆ. ಆದರೆ, ಫಲಿತಾಂಶ ಬಿಡುಗಡೆಯಾದ ರಾತ್ರಿ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ, ಇ ವಿ ಎಂ ಗಳ ಕಾರ್ಯಕ್ಷಮತೆ ಮತ್ತು ಮತಗಳ ಎಣಿಕೆಯಲ್ಲಿ ಯಾವುದೇ ದೋಷಗಳಿಲ್ಲ ಎಂದು ಹೇಳಿ ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು ಎಂದು ತೇಜಸ್ವಿ ಯಾದವ ಆರೋಪಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!