Belagavi

ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಮುಂದಿನ ಅಧ್ಯಕ್ಷ – ಸಚಿವ ರಮೇಶ

ಬೆಳಗಾವಿ, 12- ಮೊದಲೇ ನಿರ್ಧರಿಸಿದಂತೆ ಮಾಜಿ ಸಂಸದ ರಮೇಶ ಕತ್ತಿಯವರನ್ನೇ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವದಾಗಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮೊದಲು ರಮೇಶ ಕತ್ತಿಯವರಿಗೆ ಮಾತು ಕೊಡಲಾಗಿದೆ, ಅದರಂತೆ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗುವದು ಎಂದು ಹೇಳಿದರು.

ಶಿರಾ, ಆರ್.ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಸಿ ಮತ ಖರೀದಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಅದಕ್ಕೆ ಕಾಮೆಂಟ್ ಮಾಡುವದು ಬೇಡ, ದೇವರು ಕಾಂಗ್ರೆಸ್ ನವರಿಗೆ ಒಳ್ಳೆಯದು ಮಾಡಲಿ. ಬಿಜೆಪಿ ದೇಶದಲ್ಲಿ ಯಶಸ್ವಿಯಾಗಿ ಬೆಳೆಯುತ್ತಿದೆ, ಇದು ಮುಂದುವರೆಯಲಿದೆ ಎಂದರು.

ಚುನಾವಣೆಯಲ್ಲಿ ಮತಯಂತ್ರದ ಪಾತ್ರವಿದ್ದರೆ ತಾವು ಕಾಂಗ್ರೆಸ್ ನಲ್ಲಿದ್ದಾಗ ಗೋಕಾಕ ನಿಂದ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ಸೋತು ಮಾಜಿ ಶಾಸಕ ಆಗ್ತಿದ್ದೆ. ಸೋಲನ್ನು ಒಪ್ಪಿಕೊಳ್ಳದೆ ಕಾರಣಗಳನ್ನು ಹುಡುಕುವದು ಬೇಡ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!