Moscow

ಕೊರೋನ: ‘ಸ್ಪುಟ್ನಿಕ್ 5’ ಲಸಿಕೆ ಶೇಕಡ 92 ರಷ್ಟು ಯಶಸ್ವಿ

ಮಾಸ್ಕೋ, ನ 12- ಕೊರೋನಾ ನಿಯಂತ್ರಣಕ್ಕಾಗಿ ರಷ್ಯಾ ಸರ್ಕಾರ ಅಭಿವೃದ್ಧಿ ಪಡಿಸುತ್ತಿರುವ ‘ಸ್ಪುಟ್ನಿಕ್ 5’ ಲಸಿಕೆ ಶೇಕಡ 92 ರಷ್ಟು ಯಶಸ್ವಿಯಾಗಿದೆ.

ಕೊರೋನಾ ಸೋಂಕಿನಿಂದ ಪಾರಾಗಲು ಲಸಿಕೆ ಪರಿಣಾಮಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದ ಫೈಜರ್ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಶೇಕಡ 90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಣೆ ಮಾಡಲಾಗಿದೆ.

ಇದರ ಬೆನ್ನಲ್ಲೇ ರಷ್ಯಾ ಮಾಹಿತಿ ನೀಡಿ, ‘ಸ್ಪುಟ್ನಿಕ್ 5’ ಲಸಿಕೆ ಶೇಕಡ 92 ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

ಆಗಸ್ಟ್ ನಲ್ಲೇ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ನೀಡಲು ನೋಂದಣಿ ಮಾಡಿಕೊಂಡಿದ್ದ ರಷ್ಯಾ ಈವರೆಗೆ 16 ಸಾವಿರ ಮಂದಿಯ ಮೇಲೆ ಲಸಿಕೆ ಪ್ರಯೋಗಿಸಿದೆ.

ಮೂರನೇ ಹಂತದಲ್ಲಿ 40 ಸಾವಿರ ಜನರ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ. 21 ದಿನಗಳ ಅಂತರದಲ್ಲಿ ಸ್ಪುಟ್ನಿಕ್ 5 ಲಸಿಕೆ ನೀಡಲಾಗುತ್ತಿದ್ದು ಯಶಸ್ವಿಯಾಗಿದೆ ಎನ್ನುವುದು ಸದ್ಯದ ಅಧ್ಯಯನದಿಂದ ತಿಳಿದು ಬಂದಿದೆ.

 

Leave a Reply

Your email address will not be published. Required fields are marked *

Back to top button
error: Content is protected !!