New Delhi

ಆಥಿ೯ಕ ಕುಸಿತಕ್ಕೆ ಮೋದಿಯೇ ಹೊಣೆ -ರಾಹುಲ್‌

ನವದೆಹಲಿ, ನ 12- ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳಿಂದ ಭಾರತದ ಶಕ್ತಿಯನ್ನು ಅದರ ದುರ್ಬಲತೆಯಾಗಿ ಬದಲಾಯಿಸಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಗುರುವಾರ ಆರೋಪಿಸಿದ್ದಾರೆ.

“ಭಾರತ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಹಣದುಬ್ಬರದ ಪರಿಸ್ಥಿತಿಗೆ ಸಿಲುಕಿದೆ. ಮೋದಿ ಅವರ ಕ್ರಿಯೆಗಳು ಭಾರತದ ಶಕ್ತಿಯನ್ನೇ ದುರ್ಬಲತೆಯನ್ನಾಗಿ ಬದಲಾಯಿಸಿದೆ” ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಇದರೊಂದಿಗೆ ಅವರು ಪ್ರಸಕ್ತ ಸಾಲಿನ ಜುಲೈ ತಿಂಗಳಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.3ವರೆಗೆ ಕುಸಿದಿದೆ ಎಂದು ಅಂದಾಜಿಸಿರುವ ಆರ್‌ಬಿಐ ಹೇಳಿಕೆಯ ವರದಿಯನ್ನು ಲಗತ್ತಿಸಿದ್ದಾರೆ.

ಮುಂದಿನ ಆರು ತಿಂಗಳಲ್ಲಿ ಜಿಡಿಪಿ ಕುಸಿತ ಕಾಣಲಿದ್ದು, 2020-21ನೇ ಸಾಲಿನ ಅಕ್ಟೋಬರ್‌-ಡಿಸೆಂಬರ್‌ ತ್ರೈಮಾಸಿಕದಲ್ಲಿ ಮತ್ತೆ ಚೇತರಿಕೆ ಕಾಣಲಿದೆ ಎಂದು ಆರ್‌ಬಿಐ ಬುಧವಾರ ಬಿಡುಗಡೆಗೊಳಿಸಿದ್ದ ಮಾಸಿಕ ಬುಲೆಟಿನ್‌ನಲ್ಲಿ ವಿವರಿಸಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!