Bengaluru

ಸಿದ್ದು ಸವದಿಯದ್ದು ಮನುಕುಲವೇ ತಲೆ ತಗ್ಗಿಸುವಂಥ ಕೃತ್ಯ:ಎಸ್.ಆರ್.ಪಾಟೀಲ

ಬೆಂಗಳೂರು,ನ.11- ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ತಮ್ಮದೇ ಪಕ್ಷದ ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರನ್ನು ಎಳೆದಾಡಿ ಗೂಂಡಾ ಪ್ರವೃತ್ತಿ ಪ್ರದರ್ಶಿಸಿ ಅಮಾನವೀಯ ಹಲ್ಲೆ ನಡೆಸಿರುವ ಕೃತ್ಯ ಇಡೀ ಮನುಕುಲವೇ ತಲೆ ತಗ್ಗಿಸುವಂಥದ್ದು ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ ಖಂಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಎಸ್.ಆರ್.ಪಾಟೀಲ, ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಮಹಿಳೆಯರ ಮೇಲೆ ಹಲ್ಲೆ ಮಾಡುವವರು ಇದ್ದಾರೆ ಎಂದರೆ ಪಕ್ಷದ ಶಿಸ್ತು ಏನಾಯಿತು. ಇದೇನಾ ಪಕ್ಷದ ನಾಯಕರು ಮಹಿಳೆಯರಿಗೆ ನೀಡುವ ಗೌರವ..? ಎಂದು ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!