Patna

ಮತ ಗಳಿಕೆಯಲ್ಲೂ ರಾಷ್ಟ್ರೀಯ ಜನತಾ ದಳಕ್ಕೆ ಅಗ್ರಸ್ಥಾನ

ಪಾಟ್ನಾ, ನ 11- ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ನಡೆದಿದ್ದ ಚುನಾವಣೆ ನಡೆದಿದ್ದ ಮುನ್ನ ಅಂತಿಮ ಫಲಿತಾಂಶ ಹೊರಬಂದಿದೆ.

ಬಿಹಾರದ 38 ಜಿಲ್ಲೆಗಳಲ್ಲಿ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ತಡರಾತ್ರಿ ನಡೆದು 3755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಚುನಾವಣಾ ಅಯೋಗವು ಇದೇ ಮೊದಲ ಬಾರಿಗೆ ಮತ ಎಣಿಕೆ ನಡುವೆಯೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದು ವಿಶೇಷವಾಗಿತ್ತು.

ಚುನಾವಣಾ ಆಯೋಗದ ಅಧಿಕೃತ ವೆಬ್ ತಾಣದ ಮಾಹಿತಿಯಂತೆ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷ ಹಾಗೂ ಅತಿ ಹೆಚ್ಚು ಶೇಕಡಾವಾರು ಮತ ಗಳಿಕೆಯಲ್ಲಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಅಗ್ರಸ್ಥಾನದಲ್ಲಿದೆ.

ಆರ್ ಜೆಡಿ 75 ಸ್ಥಾನ ಗಳಿಸಿದರೆ ಬಿಜೆಪಿ 74 ಸ್ಥಾನ ಗಳಿಸಿದೆ. ಎನ್ಡಿಎ ಮಿತ್ರಪಕ್ಷಗಳಾದ ಎಚ್ಎಎಂ ಹಾಗೂ ವಿಐಪಿ ತಲಾ 4 ಸ್ಥಾನ ಗಳಿಸಿವೆ. ಎಲ್ ಜೆಪಿ 1 ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

ಆರ್ಜೆಡಿ: 75 ಬಿಜೆಪಿ: 74,ಕಾಂಗ್ರೆಸ್: 19,ಜೆಡಿಯು: 43ಸಿಪಿಐ(ಎಂಎಲ್): 12ಸಿಪಿಐ: 2ಸಿಪಿಐ(ಎಂ): 2ಬಿಎಸ್ಪಿ:1ಎಐಎಂಐಎಂ: 5ವಿಐಪಿ: 4ಎಚ್ಎಎಂ(ಎಸ್): 4ಫಲಿತಾಂಶ; ಶೇಕಡಾವಾರು ಮತಗಳಿಕೆಆರ್ಜೆಡಿ: 23.11%ಬಿಜೆಪಿ: 19.46%ಕಾಂಗ್ರೆಸ್: 9.48%ಜೆಡಿಯು: 15.39%ಸಿಪಿಐ: 0.83%ಸಿಪಿಐ(ಎಂ): 0.65%ಬಿಎಸ್ಪಿ:1.49%ಎಐಎಂಐಎಂ: 1.24%ಆರ್ ಎಲ್ ಎಸ್ ಪಿ: 1.77% ಲೋಕ ಜನಶಕ್ತಿ ಪಕ್ಷ: 5.66%ನೋಟಾ: 1.68%ಇತರೆ: 18.85 %

Leave a Reply

Your email address will not be published. Required fields are marked *

Back to top button
error: Content is protected !!