Hyderabad

ಬಿಹಾರದಲ್ಲಿ ಖಾತೆ ತೆರೆದ ನಂತರ ದೇಶದ ಎಲ್ಲ ಚುನಾವಣೆಗಳತ್ತ ಎಂಐಎಂ ಚಿತ್ತ

ಹೈದರಾಬಾದ್, ನ 11 -ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೀಮಾಂಚಲ ಪ್ರದೇಶದಿಂದ ಐದು ಕ್ಷೇತ್ರಗಳನ್ನು ಗೆದ್ದಿರುವ, ಹೈದಾರಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಖಿಲ ಭಾರತ ಮಜ್ಲಿಸ್‍ ಇ ಇತ್ತೆಹಾದ್‍-ಉಲ್‍ -ಮುಸ್ಲೀಮೀನ್ (ಎಐಎಂಐಎಂ) ಇದೀಗ ದೇಶದ ಎಲ್ಲ ಚುನಾವಣೆಗಳತ್ತ ಗಮನ ಹರಿಸಿದೆ. ಮಂಗಳವಾರ ರಾತ್ರಿ ಇಲ್ಲಿನ ತಮ್ಮ ನಿವಾಸದಲ್ಲಿ ಬಿಹಾರ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಎಐಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ, ‘ಬಂಗಾಳ, ಉತ್ತರ ಪ್ರದೇಶ ಮತ್ತು ದೇಶಾದ್ಯಂತ ಪ್ರತಿಯೊಂದು ಚುನಾವಣೆಗಳಲ್ಲಿ ನಾವು ಸ್ಪರ್ಧಿಸುತ್ತೇವೆ.’ ಎಂದು ಹೇಳಿದ್ದಾರೆ.

ಪ್ರತಿ ರಾಜ್ಯದಲ್ಲೂ ಉಪಸ್ಥಿತಿಯೊಂದಿಗೆ ಎಎಂಐಎಂಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯುವ ಬಗ್ಗೆ ಸುಳಿವು ನೀಡಿದ ಓವೈಸಿ, ತಮ್ಮ ಪಕ್ಷವನ್ನು ವಿಸ್ತರಿಸುವುದಕ್ಕೆ ತಮಗೆ ಹಕ್ಕಿದೆ ಎಂದು ಹೇಳಿದ್ದಾರೆ.

‘2021 ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯುವ ನಮ್ಮ ಮುಂದಿನ ಹೆಜ್ಜೆಯಾಗಿದೆ. ಅಲ್ಲಿ ಪಕ್ಷ ಗೆಲ್ಲುವುದಕ್ಕಾಗಿ ಎಲ್ಲ ಯೋಜನೆಗಳನ್ನು ರೂಪಿಸಲಾಗುವುದು. ಪಶ್ಚಿಮ ಬಂಗಾಳ ಮುಸ್ಲಿಮರ ಹಿತಾಸಕ್ತಿಯನ್ನು ಪಕ್ಷ ಕಾಪಾಡಲಿದೆ.’ ಎಂದು ಒವೈಸಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!