Mysore

ಹಸಿರು ಪಟಾಕಿ ಎಂದರೇನು ಎಂಬುದು ನನಗೂ ತಿಳಿದಿಲ್ಲ : ಆರೋಗ್ಯ ಸಚಿವರ ಉತ್ತರ

ಮೈಸೂರು,ನ 11 (ಯುಎನ್ಐ)- ಹಸಿರು ಪಟಾಕಿಯನ್ನು ಬಳಸಲು ತಜ್ಞರು ವರದಿ ನೀಡಿದ್ದಾರೆ.ಆ ವರದಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ. ಆದರೆ ಹಸಿರು ಪಟಾಕಿ ಎಂದರೇನು ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ,ತಿಳಿದುಕೊಂಡು ಹೇಳುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11ನೇ ಘಟಿಕೋತ್ಸ ವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು,ದೀಪಾವಳಿ ವೇಳೆ ಬಳಸುವ ಪಟಾಕಿ ಬಗ್ಗೆ ಆರೋಗ್ಯ ಇಲಾಕೆ ತಜ್ಞರ ವರದಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ್ದೇವೆ. ವರದಿಯಲ್ಲಿ ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿಯನ್ನು ಮಾತ್ರ ಉಪಯೋಗಿಸ ಬೇಕೆಂದು ತಜ್ಞರು ಶಿಫಾರಸ್ಸು ಮಾಡಿದ್ದಾರೆ.ಬೇರೆ ಪಟಾಕಿಯನ್ನು ಉಪಯೋಗಿಸ ಬಾರದು.ಇದರಿಂದ ಕೊರೋನಾ ಹಾಗೂ ಉಸಿರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ದೀಪಾವಳಿ ಹಬ್ಬದ ದಿನ ರಾತ್ರಿ 8 ರಿಂದ 10 ಗಂಟೆ ಸಮಯವನ್ನು ಪಟಾಕಿಗಳನ್ನು ಸಿಡಿಸಲು ನಿಗದಿಪಡಿಸಲಾಗಿದೆ ಎಂದರು.

ಈ ವೇಳೆ ಹಸಿರು ಪಟಾಕಿ ಎಂದರೆ ಏನು ಎಂಬ ಸುದ್ದಿಗಾ ರರ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಅವರು, ಹಸಿರು ಪಟಾಕಿ ಎಂದರೆ ನನಗೂ ಗೊತ್ತಿಲ್ಲ, ತಿಳಿದುಕೊಂಡು ಹೇಳುತ್ತೇನೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರು.

ಆರ್ ಆರ್ ನಗರದ ಚುನಾವಣೆ ಪ್ರಚಾರದ ವೇಳೆಯಲ್ಲಿ ಮುನಿರತ್ನ 50,000ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದೆ. ಫಲಿತಾಂಶದಲ್ಲಿ ಅದು ಸಾಬೀತು ಆಗಿದೆ. ಆರ್ ಆರ್ ನಗರದ ಗ್ರೌಂಡ್ ರಿಪೋರ್ಟ್ ತಿಳಿಯಲು ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಡಿ.ಕೆ. ಬ್ರದರ್ಸ್ ಇಬ್ಬರು ಶತಪ್ರಯತ್ನ ನಡೆಸಿದ ರು.ಆದರೆ ನಾನು ಅವರ ಮೇಲೆ ನಾನು ಆಪಾದನೆ ಮಾಡುವುದಿಲ್ಲ. ಕಾಂಗ್ರೆಸ್​ನವರು ಒಟ್ಟಾಗಿ ಆರ್ ಆರ್ ನಗರದ ಜನರ ನಾಡೀ ಮಿಡಿತ ತಿಳಿದುಕೊಳ್ಳಲು ವಿಫಲರಾದರು.ಅಲ್ಲಿನ ಸ್ಥಿತಿಗತಿಗಳನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು ಎಡವಟ್ಟು ಮಾಡಿಕೊಂಡರು ಎಂದು ಲೇವಡಿ ಮಾಡಿದರು.

ಸಚಿವ ಸಂಪುಟ ವಿಸ್ತರಣೆ /ಪುನರ್ ರಚನೆ ಬಗ್ಗೆ ಮುಖ್ಯಮಂತ್ರಿ ಅವರು ಪಕ್ಷದ ಹೈಕಮಾಂಡ್ ಭೇಟಿಗೆ ದೆಹಳಿಗೆ ತೆರಳಲಿದ್ದಾರೆ. ಸಂಪುಟಕ್ಕೆ ಯಾರನ್ನು ಸೇರಿ ಸಿಕೊಳ್ಳಬೇಕು,ಯಾರನ್ನು ಕೈಬಿಡ ಬೇಕು ಎಂಬರನ್ನು ವರಿಷ್ಟರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಅದರ ಉಸಾಬರಿ ನಮಗೆ ಬೇಡ.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಲ್ಲರಿಗೂ ಒಳ್ಳೆಯದು ಆಗುತ್ತದೆ ಎಂದು ಭರವಸೆ ನೀಡಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಿ ಯಂತ್ರ ದುರುಪಯೋಗ ಮಾಡಿಕೊಂಡು,ಹಣಬಲದಿಂದ ಗೆದ್ದಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿ ಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂದು ಅವರನ್ನೇ ಕೇಳಿ ಸತ್ಯ ತಿಳಿಯುತ್ತದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!