London

ಸಂಭಾವ್ಯ ಕೋವಿಡ್ 19 ಲಸಿಕೆ ಅತ್ಯುನ್ನತ ಗುಣಮಟ್ಟದ್ದಿರುತ್ತದೆ: ಇಂಗ್ಲೆಂಡ್ ಡ್ರಗ್ ನಿಯಂತ್ರಕ

ಲಂಡನ್, ನ 11- ಸ್ಪುಟ್ನಿಕ್ ಸಂಭಾವ್ಯ ಕೋವಿಡ್ 19 ಲಸಿಕೆಯು ಸಾರ್ವಜನಿಕವಾಗಿ ಬಳಕೆಗೆ ಬರುವ ಮೊದಲು ಅತ್ಯುನ್ನತ ಗುಣಮಟ್ಟದಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಇಂಗ್ಲೆಂಡ್ ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ ಎಂಎಚ್‌ಆರ್‌ಎ ಮುಖ್ಯ ಕಾರ್ಯನಿರ್ವಾಹಕ ಜೂನ್ ರೈನ್ ಹೇಳಿದ್ದಾರೆ.

“ಕೋವಿಡ್ ನಿಯಂತ್ರಿಸುವ ಔಷಧಿಗಳ ಎಲ್ಲಾ ಪರೀಕ್ಷೆಗಳನ್ನು ಉನ್ನತ ಗುಣಮಟ್ಟದಲ್ಲಿ ಮಾಡಲಾಗುತ್ತದೆ ಎಂಬ ವಿಶ್ವಾಸ ಸಾರ್ವಜನಿಕರಿಗಿದೆ ದೆ” ಎಂದು ಇಂಗ್ಲೆಂಡ್ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ಜೊನಾಥನ್ ವ್ಯಾನ್ ಟಾಮ್ ನೇತೃತ್ವದ ಹೊಸ ಸಾಪ್ತಾಹಿಕ ಕೋವಿಡ್ 19 ಸುದ್ದಿಗೋಷ್ಠಿಯಲ್ಲಿ ರೈನ್ ಹೇಳಿದ್ದಾರೆ.

ಲಸಿಕೆಯ ಎಲ್ಲಾ ಡೇಟಾವನ್ನು ಪರಿಶೀಲಿಸಲಾಗುವುದು ಎಂದು ಭರವಸೆಯಿತ್ತಿದ್ದು, ಲಸಿಕೆಯನ್ನು ನಿಯೋಜಿಸಿದ ನಂತರ, ಅದನ್ನು ಎಂಎಚ್‌ಆರ್‌ಎ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಿದ್ದಾರೆ.

ಕೋವಿಡ್ 19 ವಿರುದ್ಧದ ಲಸಿಕೆಗಳನ್ನು ಡಿಸೆಂಬರ್‌ನಿಂದ ತಯಾರಿಸಲು ರಾಷ್ಟ್ರೀಯ ಆರೋಗ್ಯ ಸೇವೆಗೆ ಸೂಚಿಸಲಾಗಿದೆ ಎಂದು ಇಂಗ್ಲೆಂಡ್ ನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ಮಂಗಳವಾರ ಹೇಳಿದ್ದಾರೆ. ಅಮೆರಿಕೆ ದೇಶವು 40 ಮಿಲಿಯನ್ ಲಸಿಕೆಗಳನ್ನು ಖರೀದಿಸಲು ಯುಕೆ ಫಿಜರ್ ಮತ್ತು ಬಯೋಟೆಕ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ವ್ಯಾನ್ ಟಾಮ್ ಖಚಿತಪಡಿಸಿದ್ದಾರೆ.

ವ್ಯಾಕ್ಸಿನೇಷನ್ ಮತ್ತು ರೋಗನಿರೋಧಕ ಜಂಟಿ ಸಮಿತಿಯ ಅಧ್ಯಕ್ಷ ವೀ ಶೆನ್ ಲಿಮ್ ಮಾತನಾಡಿ, ಲಸಿಕೆ ತಯಾರಾದ ಬಳಿಕ ಆರೈಕೆ ಗೃಹ ನಿವಾಸಿಗಳು ಮತ್ತು ಸಿಬ್ಬಂದಿ, 65 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ವಯಸ್ಕರಿಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!