Dharwad

6, 000 ರೂಪಾಯಿ ಲಂಚ ಪಡೆಯುವಾಗ ಧಾರವಾಡ ಜಿಪಂ ಇಂಜಿನಿಯರ್ ಎಸಿಬಿ ಬಲೆಗೆ

ಧಾರವಾಡ : ಮೂವರಿಗೆ ಸರಕಾರದ ಸಾರ್ವಾಜನಿಕ ಕಾಮಗಾರಿ ನಡೆಸಲು ಅನುಮತಿ ನೀಡಲು 6000 ರೂಪಾಯಿ ಲಂಚ ಕೇಳಿ ಪಡೆದುಕೊಳ್ಳುವಾಗ ಧಾರವಾಡ ಜಿಲ್ಲಾ ಪಂಚಾಯತ್ ಎಂಜನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮನೋಹರ್ ಮಂದೋಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಅಲ್ಲದೆ ಶೆಟ್ಟರ್ ಕಾಲೋನಿಯಲ್ಲಿರುವ ಅವರ ನಿವಾಸದ ಮೇಲೂ ರೈಡ್ ಮಾಡಿದ ಅಧಿಕಾರಿಗಳು 13.80 ಲಕ್ಷ ರೂಪಾಯಿ ನಗದು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಒಡವೆ ಪತ್ತೆ ಹಚ್ಚಿದ್ದಾರೆ.

ಕಲಘಟಗಿ ತಾಲೂಕಿನ ಕಾಮದೇನು ಗ್ರಾಮದ ಕಲ್ಲಪ್ಪ ರಾಮಪ್ಪ ಶಿರಬಡಗಿ, ಚಂದ್ರಶೇಖರಯ್ಯ ಹಿರೇಮಠ ಹಾಗು ನಾಗರಾಜ ನವಲೂರು ಸಿವಿಲ್‌ ಕಾಮಗಾರಿಗಾಗಿ ಕ್ಲಾಸ್‌-IV ಗುತ್ತಿಗೆದಾರರ ಲೈಸನ್ಸ್‌ ಪಡೆಯಲು ಸೆ.11ರಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ಲೈಸನ್ಸ್‌ ಮಾಡಿ ಕೊಡಲು ತಲಾ 2 ಸಾವಿರದಂತೆ 6 ಸಾವಿರ ನೀಡುವಂತೆ ಲಂಚ ಕೇಳಿದ್ದರು. ಈ ಬಗ್ಗೆ ಮೂವರು ಎಸಿಬಿ ಠಾಣೆಯಲ್ಲಿ ದೂರು ದಾಖಲಿಸಿದ್ದರು ಇಂಜಿನಿಯರ್ ಮಂದೋಲಿ ತಮ್ಮ ಕಚೇರಿಯಲ್ಲಿ 6 ಸಾವಿರ ಲಂಚ ನೀಡುವಾಗ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಲಂಚದ ಹಣದ ಸಮೇತ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇಂಜಿನಿಯರ್ ಮಂದೋಲ್ಲಿ ಅವರು ಭ್ರಷ್ಟಾಚಾರದಿಂದ ಸಾಕಷ್ಟು ಸಂಪಾದಿಸಿದರೆಂದು ಆರೋಪವಿದ್ದರಿಂದ ಅವರ ನಿವಾಸದ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 13.80 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಎಲ್ಲವನ್ನು ಎಸಿಬಿ ಅಧಿಕಾರಿಗಳ ತಂಡ ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.

ಎಸಿಬಿ ಉತ್ತರ ವಲಯದ ಅಧೀಕ್ಷಕ ಬಿ.ಎಸ್‌. ನೇಮಗೌಡ, ಡಿಎಸ್‌ಪಿ ಎಲ್‌. ವೇಣುಗೋಪಾಲ ಮಾರ್ಗದರ್ಶನದಲ್ಲಿ ಎಸಿಬಿ ಪಿಐ ಮಂಜುನಾಥ ಹಿರೇಮಠ ನೇತೃತ್ವದ ತಂಡ ದಾಳಿ ನಡೆಸಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!