Belagavi

ಆತ್ಮಹತ್ಯೆಗೆ ಪ್ರಚೋದಿಸಿದ ಶಿವಸೇನೆ ಮುಖಂಡನ ಬಂಧನಕ್ಕೆ ಆಗ್ರಹ

ಬೆಳಗಾವಿ, 11- ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ದೂರು ನೀಡಿ ಒಂದು ವಾರವಾದರೂ ಕ್ರಮ ತೆಗೆದುಕೊಳ್ಳದ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಾಪಟಗಲ್ಲಿಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರು.

ಬಾಪಟಗಲ್ಲಿಯ ವಿಜಯ ಗವಾನೆ ಎಂಬವರು ಕಳೆದವಾರ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪತ್ನಿ ಮೇಘನಾ ತಮ್ಮ ಪತಿಯ ಸಾವಿಗೆ ಶಿವಸೇನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಬಂಡು ಕೆರ್ವಾಡ್ಕರ್ ಕಾರಣರಾಗಿದ್ದು ಅವರನ್ನು ಬಂಧಿಸುವಂತೆ ಖಡೆಬಜಾರ ಪೊಲೀಸರಿಗೆ ದೂರೊಂದನ್ನು ನೀಡಿದ್ದರು.

ವಿಜಯ ಸಾವಿನ ನಂತರ ಕೆರ್ವಾಡ್ಕರ ತಲೆಮರಿಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗೆ ಕ್ರಮ ತೆಗೆದುಕೊಂಡಿಲ್ಲ, ಆರೋಪಿ ರಾಜಕೀಯ ವಲಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲ, ಹಾಗಾಗಿ ಪೋಲೀಸರ ವಿರುದ್ಧವೂ ಕ್ತಮ ಜರುಗಿಸಿ ಎಂದು ಮೃತರ ಪತ್ನಿ ಮೇಘನಾ, ಬಾಪಟಗಲ್ಲಿಯ ನಾಗರಿಕರು ಪ್ರತಿಭಟನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!