Mumbai

ನಿತೀಶ ಕುಮಾರ ಮತ್ತೆ ಬಿಹಾರ ಮುಖ್ಯಮಂತ್ರಿಯಾದರೆ…. ಆ ಶ್ರೇಯಸ್ಸು ಶಿವಸೇನೆಯದು…!

ಮುಂಬೈ, ನ 11- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಿತ್ರ ಪಕ್ಷ ಜೆಡಿ(ಯು) ಕಡಿಮೆ ಕ್ಷೇತ್ರಗಳಲ್ಲಿ ಗೆದ್ದಿದ್ದರೂ, ಆ ಪಕ್ಷದ ನಾಯಕ ನಿತೀಶ ಕುಮಾರ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದರೆ, ಆ ಶ್ರೇಯಸ್ಸು ತಮ್ಮ ಪಕ್ಷಕ್ಕೆ ದಕ್ಕಲಿದೆ ಎಂದು ಶಿವಸೇನೆ ಹೇಳಿದೆ.

ಈ ಕುರಿತು ಪಕ್ಷದ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಬಿಹಾರ ಚುನಾವಣಾ ಫಲಿತಾಂಶ ಪ್ರಸ್ತಾಪಿಸಿ ಹೇಳಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ ಎನ್‌ಡಿಎಗೆ ಕಠಿಣ ಪೈಪೋಟಿ ನೀಡಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ಹೊಸ ನಾಯಕನ ಆಗಮನವಾಗಿದೆ ಎಂದು ತೇಜಸ್ವಿಯನ್ನು ಕೊಂಡಾಡಿದೆ.

ಜೆಡಿ(ಯು) ಪಕ್ಷ ಕಡಿಮೆ ಸ್ಥಾನಗಳಲ್ಲಿ ಗೆದ್ದಿದ್ದರೂ ಕೂಡ ನಿತೀಶ ಕುಮಾರ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್ ಶಾ ಚುನಾವಣೆಗೆ ಮುನ್ನ ಘೋಷಿಸಿದ್ದರು. 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಸೇನೆಗೆ ಬಿಜೆಪಿ ಇದೇ ರೀತಿಯ ಭರವಸೆ ನೀಡಿತ್ತು. ಆದರೆ, ಫಲಿತಾಂಶ ನಂತರ ಕೇಸರಿ ಪಕ್ಷ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ. ಇದರ ಪರಿಣಾಮ ರಾಜ್ಯ ರಾಜಕೀಯದಲ್ಲಿ ‘ಮಹಾಭಾರತ’ವೇ ನಡೆದು ಹೋಗಿದೆ. ಈಗ ಬಿಹಾರ ಚುನಾವಣಾ ಫಲಿತಾಂಶದಲ್ಲಿ ಜೆಡಿ(ಯು)ಗೆ, ಬಿಜೆಪಿಗಿಂತ ಕಡಿಮೆ ಸ್ಥಾನಗಳು ದೊರೆತಿವೆ. ಆದರೂ, ನಿತೀಶ ಕುಮಾರ ಒಂದೊಮ್ಮೆ ಮುಖ್ಯಮಂತ್ರಿಯಾದರೆ ಅದರ ಶ್ರೇಯಸ್ಸು ಖಂಡಿತವಾಗಿಯೂ ಶಿವಸೇನೆಗೆ ಲಭಿಸಲಿದೆ ಎಂದು ಶಿವಸೇನೆ ತಿಳಿಸಿದೆ.

ಮಹಾರಾಷ್ಟ್ರ ದ ಅನುಭವವನ್ನು ದೃಷ್ಟಿಯಲ್ಲಿರಿಸಿಕೊಂಡಿರುವ ಬಿಜೆಪಿ.. ನಿತೀಶ ಕುಮಾರ ಅವರಿಗೆ ಮತ್ತೆ ರಾಜ್ಯದ ಚುಕ್ಕಾಣಿ ವಹಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಬಗ್ಗೆ ಶಿವಸೇನೆ ಪ್ರಶಂಸೆ ವ್ಯಕ್ತಪಡಿಸಿದೆ.

ಮಹಾ ಮೈತ್ರಿ ಕೂಟವನ್ನು ಒಂದು ಕೈಯಲ್ಲಿ ಮುನ್ನಡೆಸಿದ ತೇಜಸ್ವಿ, ಎನ್‌ಡಿಎ ಮೈತ್ರಿಕೂಟಕ್ಕೆ ಕಠಿಣ ಸ್ಪರ್ಧೆ ನೀಡಿದ್ದಾರೆ ಎಂದು ಹೇಳಿದೆ. ಬಿಹಾರದಲ್ಲಿ ಮೋದಿ ವರ್ಚಸ್ಸು ಕೆಲಸ ಮಾಡಿದೆ ಎಂದರೆ ಅದು ತೇಜಸ್ವಿಗೆ ಅನ್ಯಾಯ ಮಾಡಿದಂತೆ, ಆ ಯುವಕನ ಕಾರಣದಿಂದಾಗಿ ಚುನಾವಣೆ ಹಣಾಹಣಿಯಾಗಿ ಮಾರ್ಪಟ್ಟಿತ್ತು. ತೇಜಸ್ವಿ ಜಂಗಲ್ ರಾಜ್ ನ ಉತ್ತರಾಧಿಕಾರಿ ಎಂದು ನರೇಂದ್ರ ಮೋದಿ ಹೇಳುವ ಮೂಲಕ, ನಿತೀಶ ಕುಮಾರ ಇದು ನನ್ನ ಕೊನೆ ಚುನಾವಣೆಯ ಎಂದು ಜನರ ಸಹಾನುಭೂತಿಗಳಿಸಿದ್ದರು. ಆದರೆ ತೇಜಸ್ವಿ ಅಭಿವೃದ್ಧಿ, ಉದ್ಯೋಗ, ಆರೋಗ್ಯ, ಶಿಕ್ಷಣ ಮುಂತಾದ ಸಾಮಾಜಿಕ ವಿಷಯಗಳನ್ನು ಚುನಾವಣೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಶಿವಸೇನಾ ಶ್ಲಾಘಿಸಿದೆ.

ತೇಜಸ್ವಿಯಂತಹ ಹೊಸ ನಾಯಕನನ್ನು ರಾಷ್ಟ್ರೀಯ ರಾಜಕೀಯಕ್ಕೆ ಕೊಟ್ಟಿದ್ದಕ್ಕಾಗಿ ಬಿಹಾರ ಚುನಾವಣೆಯನ್ನು ಶ್ಲಾಘಿಸಿದೆ. ಇನ್ನೂ ಕಾಂಗ್ರೆಸ್ ವೈಫಲ್ಯ ತೇಜಸ್ವಿಯ ಅವಕಾಶಗಳಿಗೆ ಹೊಡೆತ ನೀಡಿದೆ ಎಂದು ಶಿವಸೇನೆ ಆರೋಪಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!