Sports

ಕೊಹ್ಲಿ ಗೈರಾಗುತ್ತಿರುವುದಕ್ಕೆ ಅಭಿಮಾನಿಗಳಿಂದ ಆಕ್ರೋಶ

ನವದೆಹಲಿ, ನ 10 (ಯುಎನ್‌ಯ) ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಂದ ಹೊರಗುಳಿಯುತ್ತಿರುವುದಕ್ಕೆ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿ ಜಾಲತಾಣದಲ್ಲಿ ಅಸಮಾಮಾದಾನ ವ್ಯಕ್ತಪಡಿಸಿದ್ದಾರೆ.

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಜನವರಿಯಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅಡಿ.17ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಣ ಡೇ-ನೈಟ್‌ ಡೆಸ್ಟ್‌ ಬಳಿಕ ಕೊಹ್ಲಿ ವಿರಾಮ ತೆಗೆದುಕೊಳ್ಳಲಿದ್ದು, ತಾಯ್ನಾಡಿಗೆ ಹಿಂದಿರುಗಲು ಬಿಸಿಸಿಐನಿಂದ ಅನುಮತಿ ಪಡೆದಿದ್ದಾರೆ.

ವಿರಾಟ್‌ ಕೊಹ್ಲಿ ಮನವಿಯನ್ನು ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ತವರಿಗೆ ವಾಪಸ್‌ ಆದ ಬಳಿಕ ಅಜಿಂಕ್ಯ ರಹಾನೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್‌ ಕೊಹ್ಲಿ ತವರಿಗೆ ಬಂದು ಮಗುವನ್ನು ನೀಡಿದ ಬಳಿಕ ಮತ್ತೆ ಆಸ್ಟ್ರೇಲಿಯಾಗೆ ಮರಳಬಹುದಾಗಿತ್ತು. ಆದರೆ 11 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಹಾಗಾಗಿ, ಇದು ಸಾಧ್ಯವಾಗುತ್ತಿಲ್ಲ.

ಒಂದೇ ಒಂದು ಟೆಸ್ಟ್ ಆಡಿ ತವರಿಗೆ ಮರಳುತ್ತಿರುವ ವಿರಾಟ್‌ ಕೊಹ್ಲಿಯ ನಿರ್ಧಾರವನ್ನು ಕೆಲ ಅಭಿಮಾನಿಗಳು ಟೀಕಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸುತ್ತಿದ್ದಂತೆ ಅಭಿಮಾನಿಗಳು ಟ್ವಿಟರ್‌ನಲ್ಲಿ, ಕೊಹ್ಲಿಗೆ ದೇಶ ಸೇವೆಗಿಂತ, ಕುಟುಂಬವೇ ಮುಖ್ಯವಾಯಿತೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, 2015 ರಲ್ಲಿಇದೇ ವಿಷಯಕ್ಕೆ ಎಂಎಸ್‌ ಧೋನಿ ನಡೆದುಕೊಂಡಿದ್ದನ್ನು ಅಭಿಮಾನಿಗಳು ನೆನಪಿಸಿದರು.

2015ರ ಐಸಿಸಿ ವಿಶ್ವಕಪ್‌ ಟೂರ್ನಿಯ ಸಲುವಾಗಿ ಎಂಎಸ್‌ ಧೋನಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದೇ ವೇಳೆ ಅವರು ಮತ್ತು ಪತ್ನಿ ಸಾಕ್ಷಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಧೋನಿ ತವರಿಗೆ ಮರಳದೆ ಭಾರತ ತಂಡವನ್ನು ಮುನ್ನಡೆಸಿದ್ದರು. ಕುಟುಂಬಕ್ಕಿಂತ ದೇಶ ಸೇವೆ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಭ್ಯಾಸ ಪಂದ್ಯಕ್ಕೂ ಎರಡು ದಿನಗಳ ಮುನ್ನ ಅಂದರೆ, 2015ರ ಫೆಬ್ರುವರಿಯ 6 ರಂದು ಝಿವಾ ಜನಿಸಿದ್ದಳು. ಈ ಕುರಿತು ಸುದ್ದಿಗಾರರು ಕೇಳಿದಕ್ಕೆ ಪ್ರತಿಕ್ರಿಯಸಿದ ಧೋನಿ, “ಖಂಡಿತಾ ಇಲ್ಲ, ಹೋಗುತ್ತಿಲ್ಲ. ಪ್ರಸ್ತುತ ದೇಶದ ಸೇವೆಯಲ್ಲಿದ್ದೇನೆ. ವಿಶ್ವಕಪ್‌ ಟೂರ್ನಿ ತುಂಬಾ ಮುಖ್ಯವಾಗಿದೆ. ಹಾಗಾಗಿ, ಟೂರ್ನಿ ಮುಗಿದ ಬಳಿಕ ತೆರಳುತ್ತೇನೆ,” ಎಂದು ಹೇಳಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!