Belagavi

ನಂದಗಡ ಟಿ ಎ ಪಿ ಸಿ ಎಂ ಎಸ್ ಸೊಸೈಟಿ ಅಧ್ಯಕ್ಷರಾಗಿ ಶ್ರೀಶೈಲ ಮಾಟೊಳ್ಳಿ ಅವಿರೋಧ ಆಯ್ಕೆ

ಖಾನಾಪೂರ, ೧೦- ತಾಲ್ಲೂಕಿನ ನಂದಗಡ ಗ್ರಾಮದ ಖಾನಾಪೂರ ತಾಲ್ಲೂಕ ಒಕ್ಕುಲತನ ಹುಟ್ಟುವಳಿ ಮಾರಾಟ ಸಂಘದ ಅಧ್ಯಕ್ಷರಾಗಿ ಲಿಂಗನಮಠ ಗ್ರಾಮದ ಶ್ರೀಶೈಲ ರಾಚಪ್ಪ ಮಾಟೊಳ್ಳಿ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಚುನಾವಣಾಧಿಕಾರಿ ಖಾನಾಪೂರ ತಹಶೀಲ್ದಾರ ರೇಶ್ಮಾ ತಾಳಿಕೋಟಿ ಈ ಆಯ್ಕೆಯನ್ನು ಘೋಷಿಸಿದರು.

ಮಾಟೊಳ್ಳಿ ಅವರ ಬೆಂಬಲಿಗರು ಸಿಹಿ ಹಂಚಿ ಸಂತಸ ಪಟ್ಟರು. ಪಟಾಕಿ, ಗುಲಾಲಿನ ಅರ್ಭಟ ಇರಲಿಲ್ಲ.
ಮಾಟೊಳ್ಳಿ ಅವರು ಮೂರು ಬಾರಿ ಈ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಸದ್ಯ ಇವರು ಲಿಂಗನಮಠ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸುತ್ತಿದ್ದಾರೆ.

ಸೂಸೈಟಿಯು 13 ಸದಸ್ಯ ಬಲಾಬಲ ಹೊಂದಿದೆ. ನೂತನ ನಿದೇ೯ಶಕ ಮಂಡಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದವು. 11 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ನೇತೃತ್ವದ ಬಣದ ಎಲ್ಲರೂ ಜಯಶಾಲಿಯಾಗಿದ್ದರು. ಅವಿರೋಧವಾಗಿ ಆಯ್ಕೆಯಾದ ಎರಡು ಸ್ಥಾನಗಳು ಕೂಡಾ ಅರವಿಂದ ಪಾಟೀಲ ಅವರ ಬಣದವರು.


ವಿರೋಧಿ ಬಣ ಕಬ್ಬೂರ ಪ್ಯಾನೆಲ್‌ನಿಂದ ಎಲ್ಲರೂ ಪರಾಭವಗೊಂಡಿದ್ದರು. ಮಾಜಿ ಶಾಸಕ ಅರವಿಂದ ಪಾಟೀಲ ಮಾರ್ಗದರ್ಶನದಲ್ಲಿ ಮಂಗಳವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮಾಟೊಳ್ಳಿ ಆಯ್ಕೆಯಾದರು.

ನೂತನ ಅಧ್ಯಕ್ಷ ಶ್ರೀಶೈಲ ಮಾಟೊಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಶಾಸಕ ಅರವಿಂದ ಪಾಟೀಲ ಅವರ ಮಾರ್ಗದರ್ಶನದಲ್ಲಿ ರೈತರ ಅಭ್ಯುದಯಕ್ಕೆ ಶ್ರಮಿಸುವೆ. ಈ ಭಾಗದ ರೈತರ ಭತ್ತದ ಬೆಳೆ ಮಾರಾಟಕ್ಕೆ ಯೋಗ್ಯ ವಾತಾವರಣ ಕಲ್ಪಿಸಲಾಗುವದು. ಸಂಘದ ವತಿಯಿಂದ 36,000 ಎಚ್.ಪಿ. ಗ್ಯಾಸ್ ಸಂಪರ್ಕ ನೀಡಲಾಗಿದೆ. ಒಟ್ಟಾರೆ ಸಂಕಷ್ಟದಲ್ಲಿದ್ದ ಕೃಷಿಕರ ಬದುಕುನ್ನು ಉತ್ತಮವಾಗಿ ಕಟ್ಟಿಕೊಡಲು ಸಹಕಾರ ನೀಡುವ ಭರವಸೆ ಇತ್ತರು.

ಅರವಿಂದ ಪಾಟೀಲ ಮಾತನಾಡಿ, ಸಂಘದ ಏಳಿಗೆಗೆ ಎಲ್ಲರೂ ಹಗಲಿರುಳು ದುಡಿಯಬೇಕು. ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಡಿಸಿಸಿ ಬ್ಯಾಂಕ್ ವತಿಯಿಂದ ಸೊಸೈಟಿಗೆ ಬೇಕಾದ ಅಗತ್ಯ ಅನುಧಾನ ಹಾಗೂ ಸೌಲಭ್ಯ ಒದಗಿಸಲು ಬದ್ದ ಎಂದರು.

ಮಾಜಿ ಅಧ್ಯಕ್ಷ ಗೋಪಾಲ ಪಾಟೀಲ, ನಿರ್ದೇಶಕರಾದ ಕಲ್ಲಪ್ಪ ಎಂ. ಪಾಟೀಲ, ನಾರಾಯಣ ಟಿ. ಪಾಟೀಲ, ಪರಶುರಾಮ ಎಚ್. ಪಾಟೀಲ, ಮಹಾರುದ್ರಯ್ಯ ಜಿ. ಹಿರೇಮಠ,
ಯಶವಂತ ಡಿ. ಪಾಟೀಲ, ವಿಠೋಬಾ ಬಿ. ಸಾವಂತ ,ಅಶ್ವಿನಿ ಅರ್ಜುನ ಕೇಸರೇಕರ, ಸುರೇಖಾ ಜಯರಾಮ ಮಾಕಾವಿ, ಚಾಂದಸಾಬ ಐ. ಗದಗ, ಸಂಬಾಜಿ ಆರ್. ಪಾರಿಶ್ವಾಡ,
ಜಿತೇಂದ್ರ ಟಿ. ಮಾದಾರ, ದುರ್ಗಪ್ಪಾ ಎಲ್. ತಳವಾರ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!