Ranchi

ಲಾಲೂ ಪ್ರಸಾದ ಯಾದವ ಅಸ್ವಸ್ಥ

ರಾಂಚಿ, ನ 9- ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮುಖ್ಯಸ್ಥ ಲಾಲೂ ಪ್ರಸಾದ ಯಾದವ ಅವರ ಆರೋಗ್ಯ ಉತ್ತಮವಾಗಿಲ್ಲ ಎಂದು ರಾಂಚಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( (ರಿಮ್ಸ್) ತಿಳಿಸಿದೆ.

ಮೇವು ಹಗರಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲೂ ಪ್ರಸಾದ ಯಾದವ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಕಳೆದ ಕೆಲವು ದಿನಗಳಿಂದ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಹದಲ್ಲಿನ ವಿವಿಧ ಅಂಗಾಂಗಳು ಸೂಕ್ತವಾಗಿ ಕಾರ್ಯನಿರ್ವಹಿಸದ ಕಾರಣ ಅವರನ್ನು ಎರಡು ವರ್ಷಗಳ ಹಿಂದೆ ರಿಮ್ಸ್ ಗೆ ದಾಖಲಿಸಿದ್ದರು. ಲಾಲೂ ಅವರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಜೊತೆಗೆ ಈ ಹಿಂದೆ ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ.

ಲಾಲು ಯಾದವ ಅವರನ್ನು ರಿಮ್ಸ್ ದಾಖಲಿಸಿದಾಗ ಅವರ ಮೂತ್ರಪಿಂಡದ ಕಾರ್ಯ ನಿರ್ವಹಣೆ ಶೇ. 50 ಕ್ಕಿಂತ ಕಡಿಮೆಯಿತ್ತು. ನಂತರ ಅದು ಶೇ 40ಕ್ಕೆ ಕುಸಿದಿದ್ದು, ಪ್ರಸ್ತುತ ಶೇ 25 ರಷ್ಟು ಬೇಸ್ ಲೈನ್ ನಲ್ಲಿದೆ ಎಂದು ವೈದ್ಯರು ಹೇಳುತ್ತಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 4 ನೇ ಹಂತ ಎಂದು ಕರೆಯಲಾಗುತ್ತದೆ. ಅವರ ಮೂತ್ರಪಿಂಡಗಳ ಕಾರ್ಯನಿರ್ವಹಣೆ ಮತ್ತಷ್ಟು ಕ್ಷೀಣಿಸಿದರೆ ಅವರಿಗೆ ಡಯಾಲಿಸಿಸ್ ಒಳಪಡಿಸಬೇಕಾಗುತ್ತದೆ. ಆಗ ಅವರನ್ನು ಏಮ್ಸ್ ಗೆ ಕಳುಹಿಸಲು ಶಿಫಾರಸ್ಸು ಮಾಡಲಿದ್ದೇವೆ ಎಂದು ಎಂದು ವೈದ್ಯರು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!