Kalaburagi

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷದ ವಿರೋಧಿಗಳಿಂದಲೇ ಗುಲ್ಲು- ರಂಭಾಪುರಿ ಶ್ರೀಗಳು

ಕಲಬುರಗಿ,ನ.9- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ಎಂಬ ಕುರಿತು ಪಕ್ಷದಲ್ಲಿನ ಕೆಲ ವಿರೋಧಿಗಳು ಗುಲ್ಲು ಎಬ್ಬಿಸುತ್ತಿದ್ದಾರೆ ಎಂದು ಜಗದ್ಗುರು ರಂಭಾಪುರಿ ಶ್ರೀಗಳು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಎಂಬುದನ್ನು ಪಕ್ಷದಲ್ಲಿನ ಕೆಲ ವಿರೋಧಿಗಳು ಗುಲ್ಲು ಎಬ್ಬಿಸುತ್ತಿದ್ದಾರೆ. ಆ ಗುಲ್ಲು ಸಂಗತಿಗಳಿಗೆ ಕೇಂದ್ರದ ವರಿಷ್ಠರು ಖಂಡಿತವಾಗಿಯೂ ಗಮನ ನೀಡುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದರು.

ರಂಭಾಪುರಿ ಪೀಠ ಯಾವತ್ತು ರಾಜಕೀಯ ವಿಚಾರ ಮಾತನಾಡಲು ಇಚ್ಛಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರ್ಕಾರವಿದೆ. ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಯಡಿಯೂರಪ್ಪ ರಾಜ್ಯದ ಜನರ ಸೇವೆ ಮಾಡುತ್ತಿದ್ದಾರೆ ಎಂದರು.

ಯಡಿಯೂರಪ್ಪ ಅವರಿಗೆ 78 ವರ್ಷ ಇರುವುದರಿಂದ ಪಕ್ಷದ ಕೆಲವರಿಂದ ವಯಸ್ಸು ಮೀರಿದೆ ಎಂಬ ಮಾತುಗಳು ಕೇಳಿ ಬಂದಿದೆ ಎಂದ ಅವರು,ವಯಸ್ಸಿಗಿಂತ ಯಡಿಯೂರಪ್ಪ ಅವರ ಬಳಿ ಉತ್ಸಾಹ ಹೆಚ್ಚಿದೆ ಎಂದರು.

ಈ ವಯಸ್ಸಿನಲ್ಲೂ ಅವರು ಇಡೀ ರಾಜ್ಯ ಸುತ್ತಾಡಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲ ವರ್ಗ ಮತ್ತು ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಿದ್ದಾರೆ. ವಿರೋಧ ಪಕ್ಷದವರಿಗೂ ಯಡಿಯೂರಪ್ಪ ಅವರ ಕಾರ್ಯವೈಖರಿ ಶ್ರಮದ ಬಗ್ಗೆ ಗೊತ್ತಿದೆ. ಪಕ್ಷ ಬೇರೆ ಬೇರೆ ಆಗಿರಬಹುದು. ಅವರವರ ಪಕ್ಷದ ಕಾರ್ಯವಿಧಾನ ಬೇರೆ ಆಗಿರಬಹುದು.ಆದರೆ, ಯಡಿಯೂರಪ್ಪ ವ್ಯೆಯಕ್ತಿಕವಾಗಿ ರಾಜ್ಯದ ಜನರ ಹಿತಕ್ಕಾಗಿ ಅಭಿವೃದ್ಧಿಗಾಗಿ ಶ್ರಮ ಪಡುತ್ತಿದ್ದಾರೆ. ಉಳಿದಿರುವ ಎರಡೂವರೆ ವರ್ಷದ ಅವಧಿ ಸಲೀಸಾಗಿ ಪೂರ್ಣಗೊಳಿಸಲು ಪಕ್ಷದ ವರಿಷ್ಠರು ಅವಕಾಶ ಕೊಟ್ಟೆ ಕೊಡುತ್ತಾರೆ. ಅದರಲ್ಲಿ ಅನುಮಾನವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಲ್ಲಿ ಬಿಜೆಪಿ ಪಕ್ಷಕ್ಕೆ ಬಹಳಷ್ಟು ಪೆಟ್ಟುವುದರಲ್ಲಿ ಸಂಶಯವಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!