United States

ಹಲವು ದೇಶಗಳಲ್ಲಿ ಮಹತ್ವ ಸ್ಥಾನ ಅಲಂಕರಿಸಿರುವ ಭಾರತೀಯರು…..!!

ನ್ಯೂಯಾರ್ಕ್,ನ 9- ಅಮೆರಿಕಾದಲ್ಲಿ ಎರಡನೇ ಅತ್ಯುನ್ನತ ಸ್ಥಾನ ಅಲಂಕರಿಸಿದ ಮೊದಲ ಮಹಿಳೆಯಾಗಿ, ಭಾರತ ಮೂಲದ ಕಮಲಾ ದೇವಿ ಹ್ಯಾರಿಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಮಾತಿಗೆ ಬಂದರೆ ಅದು ಅಮರಿಕಾ ಮಾತ್ರವಲ್ಲ, .. ಯು ಕೆ, ಕೆನಡಾ, ಸಿಂಗಾಪುರ್, ನ್ಯೂಜಿಲೆಂಡ್ .. ಹೀಗೆ ಹಲವು ದೇಶಗಳಲ್ಲಿ ಭಾರತೀಯ ಮೂಲದ ಜನರು ನಾಯಕತ್ವದ ಸ್ಥಾನಗಳನ್ನು ಅಲಂಕರಿಸಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ನಾಯಕರು ನಮ್ಮ ರಾಷ್ಟ್ರ ಹಾಗೂ ಸಂಸ್ಕೃತಿಯ ಸಂಕೇತಗಳಾಗಿರುವ ಜತೆಗೆ ಭಾರತದ ಹೆಸರನ್ನು ಜಗತ್ತಿನ ದಿಕ್ಕುಗಳಲ್ಲಿಯೂ ಪಸರಿಸುತ್ತಿದ್ದಾರೆ.

ನಿಕ್ಕಿ ಹ್ಯಾಲೆ
ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ (48) 2024 ರಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರೀಕ್ಷೆಯಿದೆ. ಅಮೆರಿಕಾ ಅಡಳಿತ ಶ್ರೇಣಿಯಲ್ಲಿ ಕ್ಯಾಬಿನೆಟ್ ಹಂತ ಸಾಧಿಸಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಈಕೆ. ಕಿರಿಯ ವಯಸ್ಸಿನಲ್ಲಿ ದಕ್ಷಿಣ ಕೆರೊಲಿನಾದ ಮೊದಲ ಮಹಿಳಾ ಗವರ್ನರ್ ಆಗಿ ಆಯ್ಕೆಯಾದ ಹಾಗೂ ಆ ಹುದ್ದೇರಿದ ಭಾರತೀಯ ಮೂಲದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದು ಕೊಂಡಿದ್ದಾರೆ.

ಪ್ರಿಯಾಂಕಾ ರಾಧಾಕೃಷ್ಣನ್
ನ್ಯೂಜಿಲೆಂಡ್ ಸಂಸತ್ತಿನಲ್ಲಿ ಮಲೆಯಾಳಂ ನಲ್ಲಿ ಮಾತನಾಡಿ ಪ್ರಪಂಚವನ್ನು ಸಂಭ್ರಮಾಶ್ಚರ್ಯದಲ್ಲಿ ಮುಳುಗಿಸಿದ ಮಹಿಳಾ ನಾಯಕಿ ಪ್ರಿಯಾಂಕಾ ರಾಧಾಕೃಷ್ಣನ್ (41) ಭಾರತದಲ್ಲಿ ಜನಿಸಿದ ಪ್ರಿಯಾಂಕಾ ಸಿಂಗಾಪುರದಲ್ಲಿ ಶಿಕ್ಷಣ ಪಡೆದು, ನ್ಯೂಜಿಲೆಂಡ್‌ಗೆ ತೆರಳಿದರು. ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದ ಮಹಿಳೆಯರು, ಶೋಷಿತ ವಲಸೆ ಕಾರ್ಮಿಕರ ಪರ ವಕಾಲತ್ತು ವಹಿಸಿದರು. 2017 ಹಾಗೂ 2019 ರಲ್ಲಿ ಲೇಬರ್ ಪಕ್ಷದಿಂದ ಸಂಸತ್ ಸದಸ್ಯರಾಗಿ ಚುನಾಯಿತರಾದರು. ಸಚಿವರ ಸಂಸದೀಯ ಖಾಸಗಿ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಹರ್ ಜಿತ್ ಸಜ್ಜನ್
ಕೆನಡಾದ ದಕ್ಷಿಣ ವ್ಯಾಂಕೋವರ್ ಕ್ಷೇತ್ರದಿಂದ 2015 ರಲ್ಲಿ ಸಜ್ಜನ್ (50) ಮೊದಲ ಬಾರಿಗೆ ಕೆನಡಾದ ಸಂಸತ್ತಿಗೆ ಆಯ್ಕೆಯಾದರು. ಐದನೇ ವಯಸ್ಸಿನಲ್ಲಿ ಪೋಷಕರೊಂದಿಗೆ ಕೆನಡಾಕ್ಕೆ ವಲಸೆ ಬಂದರು. ವ್ಯಾಂಕೋವರ್ ಪೊಲೀಸ್ ವಿಭಾಗದಲ್ಲಿ ಪತ್ತೆದಾರರಾಗಿ, ಬ್ರಿಟೀಷ್ ಕೊಲಂಬಿಯಾ ರೆಜಿಮೆಂಟ್ ನಲ್ಲಿ ಲೆಪ್ಟಿನೆಂಟ್ ಕರ್ನಲ್ ಆಗಿ ಕಾರ್ಯನಿರ್ವಹಿಸಿದರು. ಈಗ ಆ ದೇಶದ ರಕ್ಷಣಾ ಸಚಿವರಾಗಿರುವ ಸಜ್ಜನ್ .. 11 ವರ್ಷಗಳ ಕಾಲ ವ್ಯಾಂಕೋವರ್ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ರಿಷಿ ಸುನಕ್
ಈ ವರ್ಷದ ಫೆಬ್ರವರಿಯಲ್ಲಿ, ರಿಷಿ ಸುನಕ್ (40) ಖಜಾನೆಯ ಚಾನ್ಸಲರ್ ಆಗಿ ನೇಮಿಸಲಾಯಿತು. ಈ ಹಿಂದೆ ಅವರು ಖಜಾನೆಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವಸತಿ ಮತ್ತು ಸ್ಥಳೀಯ ಸಂಸ್ಥೆಗಳ ರಾಜ್ಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕ್, 2015ರ ಮೇ ತಿಂಗಳಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2017 ಜೂನ್ ನಿಂದ ಸಚಿವರಾಗಿ ನೇಮಕಗೊಳ್ಳುವವರೆಗೂ ಅವರು ವಾಣಿಜ್ಯ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರಗಳಿಗೆ ಸಂಬಧಿಸಿದ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ಪ್ರೀತಿ ಪಟೇಲ್
ಬ್ರಿಟನ್‌ನಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸೇವೆ ಸಲ್ಲಿಸಿದ ಭಾರತೀಯ ಮೂಲದ ಮೊದಲ ಮಹಿಳೆ ಪ್ರೀತಿ ಪಟೇಲ್(48) 2013ರ ನವೆಂಬರ್ ನಲ್ಲಿ ಅಂದಿನ ಪ್ರಧಾನಿ ಡೇವಿಡ್ ಕ್ಯಾಮರೂನ್ ಆಕೆಯನ್ನು ಮಂತ್ರಿಯಾಗಿ ನೇಮಿಸಿದರು. ನಂತರ 2014 ರಲ್ಲಿ ಖಜಾನೆ ಸಚಿವಾಲಯ ಸಚಿವರಾಗಿ, 2015 ರಲ್ಲಿ ಸಹಾಯಕ ಉದ್ಯೋಗ ಸಚಿವರಾಗಿ ಹಾಗೂ 2016 ರಲ್ಲಿ ಅಂತರರಾಷ್ಟ್ರೀಯ ಅಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು, 2019 ರಲ್ಲಿ ಗೃಹ ವ್ಯವಹಾರಗಳ ಸಹಾಯಕ ಸಚಿವರಾದರು.

ಲಿಯೋ ವರಡ್ಕರ್
ಐರ್ಲೆಂಡ್‌ನ ದೇಶಧಲ್ಲಿ 2017ರಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಚುನಾಯಿತರಾದ ಮೊದಲ ಸಲಿಂಗಿ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಮುಂಬೈನ ಅಶೋಕ್ ವರದ್ಕರ್ ಹಾಗೂ ಐರ್ಲೆಂಡ್‌ನ ಮರಿಯಮ್ ದಂಪತಿಗೆ ಡಬ್ಲಿನ್‌ನಲ್ಲಿ ಜನಿಸಿದ ಲಿಯೋ ಅವರು ಈ ಹಿಂದೆ ಐರ್ಲೆಂಡ್‌ನ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು 24 ನೇ ವಯಸ್ಸಿನಲ್ಲಿ ಮೊದಲು ಕೌನ್ಸಿಲರ್ ಆಗಿ ಆಯ್ಕೆಗೊಂಡಿರುವ ಅವರು ವೃತ್ತಿಪರ ವೈದ್ಯರಾಗಿದ್ದಾರೆ. ಐರ್ಲೆಂಡ್‌ನ ಹೊಸ ಪ್ರಧಾನ ಮಂತ್ರಿ ಮೈಕೆಲ್ ಮಾರ್ಟಿನ್ ಅವರಿಗೆ ಅವಕಾಶ ಕಲ್ಪಿಸಲು ಅವರು ಈ ವರ್ಷದ ಜೂನ್‌ನಲ್ಲಿ ಪ್ರಧಾನಿ ಕೆಳಗಿಳಿದರು. ಎರಡು ವರ್ಷಗಳ ನಂತರ ಮತ್ತೆ ಅವರು ದೇಶದ ಪ್ರಧಾನಿಯಾಗಲಿದ್ದಾರೆ.

ಪ್ರೀತಮ ಸಿಂಗ್
ಸಿಂಗಪುರ ಸಂಸತ್ತಿನಲ್ಲಿ 2020ರ ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 93 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ವರ್ಕರ್ಸ್ ಪಾರ್ಟಿ 10 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಪಕ್ಷದ ಅಧ್ಯಕ್ಷರು ಭಾರತೀಯ ಮೂಲದ ಪ್ರೀತಮ್ ಸಿಂಗ್. ಸಿಂಗಾಪುರದ ಸಂಸದೀಯ ಇತಿಹಾಸದಲ್ಲಿ ವರ್ಕರ್ಸ್ ಪಾರ್ಟಿ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಪಕ್ಷ ಅಧಿಕೃತ ಮಾನ್ಯತೆ ಪಡೆದ ಮೊದಲ ವಿರೋಧ ಪಕ್ಷವಾಗಿದೆ.

 

Leave a Reply

Your email address will not be published. Required fields are marked *

Back to top button
error: Content is protected !!