Dharwad

ಸಿಬಿಐ ವಿಚಾರಣೆಗೆ ಹಾಜರಾದ ಯೋಗೀಶಗೌಡ ಪತ್ನಿ ಮಲ್ಲಮ್ಮ

ಧಾರವಾಡ, 9- ಬಿಜೆಪಿಯಲ್ಲಿದ್ದ ತಮ್ಮ ಪತಿ ಯೋಗೀಶಗೌಡ ಹತ್ಯೆ ಪ್ರಕರಣದ ನಂತರ ತಾವು ಕಾಂಗ್ರೆಸ್ ಸೇರಿದ ಹಿನ್ನಲೆ ಕುರಿತು ಮಲ್ಲಮ್ಮ ಇಂದು ಸೋಮವಾರ ಧಾರವಾಡದಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದರು.

ಪತಿ ಹತ್ಯೆಯಾದ ನಂತರ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಆರೋಪ ಮಾಡಿದ್ದ ಮಲ್ಲಮ್ಮ ನಂತರ ಪತಿ ಹತ್ಯೆ ಹಿಂದೆ ಯಾರಿದ್ದರೋ ಗೊತ್ತಿಲ್ಲವೆಂದು ಹೇಳಿ ನಂತರ ಕಾಂಗ್ರೆಸ್ ಸೇರಿದ್ದರು. ಕುಲಕರ್ಣಿ ವಿರುದ್ಧ ಆರೋಪ ಮಾಡದಿರುವದಕ್ಕೆ ಹಾಗು ಕಾಂಗ್ರೆಸ್ ಸೇರಲು ಅವರು 2 ಕೋಟಿ ರೂಪಾಯಿ ಪಡೆದಿದ್ದರು ಎಂಬ ಆರೋಪವೂ ಅವರ ಮೇಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಸಿಬಿಐ ವಿಚಾರಣೆ ಎದುರಿಸಿದ್ದಾರೆನ್ನಲಾಗಿದೆ.

ವಿನಯ ಕುಲಕರ್ಣಿ ಸಚಿವರಾಗಿದ್ದಾಗ ಅವರ ಅಧಿಕೃತ ಆಪ್ತ ಕಾರ್ಯದರ್ಶಿ ಆಗಿದ್ದವರು ಅವರ ಕಾಲೇಜ್ ನ ಸಹಪಾಠಿ, ಕೆಎಎಸ್ ಅಧಿಕಾರಿ ಸೋಮಲಿಂಗ ನ್ಯಾಮಗೌಡ. ಅವರ ಮೂಲಕವೇ ಮಲ್ಲಮನವರಿಗೆ 2 ಕೋಟಿ ಹಣ ಸಂದಾಯವಾಗಿದೆ ಎಂದು ಆರೋಪಿಸಲಾಗಿದೆ. ಹಾಗಾಗಿ, ನ್ಯಾಮಗೌಡರೂ ಇಂದು ವಿಚಾರಣೆಗೆ ಹಾಜರಾಗಿದ್ದರು.

ಮಲ್ಲಮ್ಮ ಕಾಂಗ್ರೆಸ್ ಸೇರಲು ಕಾರಣರಾದ ಕುಲಕರ್ಣಿ ಆಪ್ತ ನಾಗರಾಜ ಗೌರಿ ಕೂಡ ವಿಚಾರಣೆ ಎದುರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!