New Delhi

ದೇಶದಲ್ಲಿ ಕೊರೋನಾ ಪ್ರಕರಣ 84,62,081ಕ್ಕೆ ಏರಿಕೆ

ನವದೆಹಲಿ, ನ 07- ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 50,357 ಹೊಸ ಕೋವಿಡ್ ಪ್ರಕರಣಗಳು ದಾಖಲಾದ ಬಳಿಕ ಕೋವಿಡ್ ಸೋಂಕಿತರ ಸಂಖ್ಯೆ 84,62,081 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದೆ.

ಇದೇ 24 ಗಂಟೆಗಳ ಅವಧಿಯಲ್ಲಿ, ಸೋಂಕಿಗೆ 577 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ1,25,562 ಕ್ಕೆ ತಲುಪಿದೆ. ಆದಾಗ್ಯೂ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,141 ರಷ್ಟು ಕಡಿಮೆಯಾಗಿದ್ದು, ಪ್ರಸ್ತುತ ಭಾರತದಲ್ಲಿ 5,16,632 ಸಕ್ರಿಯ ಪ್ರಕರಣಗಳಿವೆ.

ಕಳದೆ 24 ಗಂಟೆಯಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 53,920 ರಷ್ಟಿದ್ದು, ಗುಣಮುಖರಾದವರ ಸಂಖ್ಯೆ ಇಲ್ಲಿಯವರೆಗೆ 78,19,887 ಕ್ಕೆ ತಲುಪಿದೆ.

ಶೇಕಡಾವಾರು ಪ್ರಮಾಣದಲ್ಲಿ, ಸಕ್ರಿಯ ಪ್ರಕರಣ ಶೇ 6.11, ಗುಣಮುಖರಾದವರ ಶೇಕಡಾವಾರು ಪ್ರಮಾಣ 92.41ರಷ್ಟು ಹಾಗೂ ಮರಣ ಪ್ರಮಾಣ ಶೇ. 1.48ರಷ್ಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಶುಕ್ರವಾರ 11,13,209 ಮಾದರಿಗಳನ್ನು ಕೋವಿಡ್ ಪತ್ತೆಗಾಗಿ ಪರೀಕ್ಷಿಸಲಾಯಿತು. ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 11,65,42,304 ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!