Belagavi

ಕನ್ನಡದ ಅಸ್ಮಿತೆ ಸದಾ ಇರಬೇಕು – ಜಿ.ಕೆ.ಗಾಂವ್ಕರ

ಬೆಳಗಾವಿ, ನ 7 – ಸ್ಥಳೀಯ ಎಸ್ ಜಿವಿ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶನಿವಾರ ಕನ್ನಡ ಭಾವ – ವೈಭವ ಕಾರ್ಯಕ್ರಮ(ವರ್ಚ್ಯುವಲ್)ವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದಭ೯ದಲ್ಲಿ ಕೆಆರ್‌ಸಿಇಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಕೆ.ಗಾಂವ್ಕರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡದ ಅಸ್ಮಿತೆ ಸದಾ ಇರಬೇಕು, ಕನ್ನಡದ ನೆಲದಲ್ಲಿ ಜನಿಸಿದ ನಾವು ಬೇರೆ ಬೇರೆ ಭಾಷೆಗಳನ್ನು ಗೌರವಿಸಬೇಕು. ಆದರೆ ಕನ್ನಡ ನಮ್ಮ ಉಸಿರಾಗಿರಲಿ. ನಮ್ಮೆಲ್ಲರ ಜೀವದ ಕಣಕಣದಲ್ಲೂ ಕನ್ನಡ ನೆಲೆಗೊಳ್ಳಲಿ ಎಂದು ಹೇಳಿದರು.

ಕನ್ನಡ ಭಾಷೆಗೆ ನಶಿಸುವ ಆತಂಕವಿಲ್ಲ. ಆದರೆ ಹೆಚ್ಚೆಚ್ಚು ಬಳಸುವಂತಾಗಬೇಕು. ಕನ್ನಡ ಮಾತನಾಡಲು ಹಿಂಜರಿಯುವ ಮನೋಭಾವ ಸರಿಯಲ್ಲ ಎಂದೂ ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ ವಿ ಭಟ್ಟ ಮಾತನಾಡಿ, ಕನ್ನಡ ಒಂದು ಕುಟುಂಬದ ಭಾಷೆ, ಕನ್ನಡವನ್ನು ಒಂದುಗೂಡಿಸಲು ಮೊದಲಿನಿಂದಲೂ ಸಾಕಷ್ಟು ಪರಿಶ್ರಮ ಪಡಲಾಗಿದೆ. ಆ ಪರಿಶ್ರಮಕ್ಕೆ ಬೆಲೆ ಬರಬೇಕು. ಕನ್ನಡ ನಮ್ಮ ಹಕ್ಕು, ಅದನ್ನು ಸದಾ ಬಳಸಿಕೊಳ್ಳಬೇಕು, ರಕ್ಷಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿನಿ ಸುರಭಿ ಖೋತ ಪ್ರಾರ್ಥನೆ ಹಾಡಿದರು. ಉಪಪ್ರಾಚಾರ್ಯ ಆನಂದ ಖೋತ ಸ್ವಾಗತಿಸಿದರು. ನರಸಿಂಹ ಭಟ್ಟ ಅತಿಥಿಗಳನ್ನು ಪರಿಚಯಿಸಿದರು.
ಮುಕುಂದ ಗೋಖಲೆ, ಅಭಿಜಿತ ಹಣಗೋಡಿಮಠ ಹಾಗೂ ವಿದ್ಯಾರ್ಥಿಗಳು ಕನ್ನಡದ ಕುರಿತು ಮಾತನಾಡಿದರು. ಭಾವ ವೈಭವದಲ್ಲಿ ಮಾತುಗಾರಿಕೆ, ಹಾಡುಗಾರಿಕೆ, ಕವನ ವಾಚನ ಕಾರ್ಯಕ್ರಮಗಳು ನಡೆದವು. ಉಪನ್ಯಾಸಕ ರಾಜು ಭಟ್ಟ ನಿರೂಪಿಸಿದರು. ಉಪನ್ಯಾಸಕ ಮಹೇಶ ಢವಳೇಶ್ವರ ವಂದಿಸಿದರು.

ಹಾಜರಿದ್ದ ಎಲ್ಲರಿಗೂ ಕನ್ನಡದ ಶಾಲು ಹಾಗೂ ಕನ್ನಡ ಪುಸ್ತಕವನ್ನು ನೀಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಆನ್ ಲೈನ್‌ನಲ್ಲಿ ಹಾಜರಿದ್ದು ಕಾರ್ಯಕ್ರಮ ವಿಕ್ಷಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!