Kerala

ಚರ್ಚ ಅಂಗ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ

ತಿರುವನಂತಪುರಂ, ನ 7- ಕೇರಳದ ಸು ವಾರ್ತಾ ಬೋಧಕ ಕೆ.ಪಿ.ಜೋಹಾನ್ಸ್ ಬಿಲೀವರ್ಸ್ ಚರ್ಚ್‌ನ ಅಂಗ ಸಂಸ್ಥೆ ಕಚೇರಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಈ ಸಂಸ್ಥೆಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ದಾಳಿಯಲ್ಲಿ 5 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದಂತೆ. ಈ ಸಂಸ್ಥೆಗಳಲ್ಲಿ ಶೋಧನೆ ಗುರುವಾರದಿಂದಲೇ ಆರಂಭಗೊಂಡಿವೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿದ ಆರೋಪಗಳನ್ನು ಸಂಸ್ಥೆಗಳು ಎದುರಿಸುತ್ತಿವೆ. ಶೋಧನೆ ಇನ್ನೂ ಮುಂದುವರೆದಿದೆ.

ಬಿಲೀವರ್ಸ್ ಚರ್ಚ್ ಕೇರಳ ಹಾಗೂ ಇತರ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಶಬರಿಮಲೆ ವಿಮಾನ ನಿಲ್ದಾಣ ನಿರ್ಮಿಸುತ್ತಿರುವ ಪಟ್ಟಣಂ ತಿಟ್ಟ ಜಿಲ್ಲೆಯ ಚೆರುವಲ್ಲಿ ಬಳಿ ಎಸ್ಟೇಟ್ ಕೂಡಾ ಈ ಸಂಸ್ಥೆಯ ಆಧೀನದಲ್ಲಿದೆ.

ಕೇಂದ್ರ ಗೃಹ ಸಚಿವಾಲಯ ಈ ಚರ್ಚ್ ನೇತೃತ್ವದಲ್ಲಿ ನಡೆಸುತ್ತಿರುವ ಮೂರು ಎನ್‌ ಜಿ ಒಗಳಿಗೆ ವಿದೇಶಿ ದೇಣಿಗೆ ಸ್ವೀಕರಿಸುವುದನ್ನು 2017ರಲ್ಲಿ ನಿಷೇಧಿಸಿತ್ತು. ಆದರೂ, ಇತರರ ಹೆಸರಿನಲ್ಲಿ ವಿದೇಶಿ ಹಣ ಸ್ವೀಕರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 100 ಕೋಟಿ ರೂ. ವಿದೇಶಿ ದೇಣಿಗೆ ಬಂದಿವೆ ಎಂದು ತಿಳಿದು ಬಂದಿದೆ.

ಶೋಧನೆ ಕಾರ್ಯ ಪೂರ್ಣಗೊಂಡ ನಂತರ ಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ನಿಧಿಗಳ ದುರುಪಯೋಗ, ತೆರಿಗೆ ವಂಚನೆ ಸಂಬಂಧ ಸ್ಪಷ್ಟ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!