Bengaluru

“ಮುಂದಿನ ಮುಖ್ಯಮಂತ್ರಿ” ಹೇಳಿಕೆ ನೀಡಿದ್ದ ಜಮೀರ ಅಹ್ಮದ, ಸೌಮ್ಯಾ ರೆಡ್ಡಿ ಗೆ ನೋಟೀಸ

ಬೆಂಗಳೂರು, ೭- “ಮುಂದಿನ ಮುಖ್ಯಮಂತ್ರಿ” ವಿಷಯದ ಕುರಿತು ಮಾತಾಡಿದ್ದ ತನ್ನದೇ ಶಾಸಕರಾದ ಜಮೀರ ಅಹ್ಮದ ಹಾಗು ಸೌಮ್ಯ ರೆಡ್ಡಿಗೆ ಅವರಿಗೆ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ ನೀಡಿ, ಒಂದು ವಾರದೊಳಗೆ ಉತ್ತರ ನೀಡುವಂತೆ ಆದೇಶಿಸಿದೆ.

ಚಾಮರಾಜಪೇಟೆ ಶಾಸಕ ಜಮೀರ ಅಹ್ಮದ ಅವರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಹೇಳಿಕೆ ನೀಡಿದ್ದರು. ಆದರೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರನ್ನು ಗೆಲ್ಲಿಸಿದರೆ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಲಿದ್ದಾರೆ ಎಂದು ಹೇಳಿದ್ದರು.

ಈ ವಿಷಯ ಪಕ್ಷದಲ್ಲಿ, ಮಾಧ್ಯಮಗಳಲ್ಲಿ ದೊಡ್ ಡಮಟ್ಟದ ಚರ್ಚೆಗೆ ಆಸ್ಪದವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಶಾಸಕರಿಗೆ ನೋಟಿಸ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!