Belagavi

ಬಿಜೆಪಿಯಲ್ಲೂ ಮೂರು ಗುಂಪುಗಳಿವೆ -ಸತೀಶ

ಬೆಳಗಾವಿ, 7- ರಾಜ್ಯ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ, “ಮನೆಯೊಂದು ಮೂರು ಬಾಗಿಲು” ಎಂಬಂತಾಗಿದೆ ಅದರ ಕಥೆ ಎಂದು ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ರಾಜಕೀಯ ಪಕ್ಷವೆಂದ ಮೇಲೆ ಗುಂಪುಗಾರಿಕೆ ಇದ್ದೇ ಇರುತ್ತದೆ. ಬಿಜೆಪಿಯಲ್ಲೂ ಗುಂಪುಗಾರಿಕೆ ಇದೆ. ಅದೆಲ್ಲ ಸಾಮಾನ್ಯವೆಂದರು.

ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಗೆ ಸಂಬಂಧಿಸಿದಂತೆ ದೆಹಲಿಯಲೊಂದು, ರಾಜ್ಯದಲ್ಲೆರಡು ಗುಂಪುಗಳಿವೆ. ಪರಸ್ಪರರಿಗೆ ಗೊತ್ತಿಲ್ಲದಂತೆ ಒಬ್ಬರ ಕಾಲೊಬ್ಬರು ಎಳೆಯುತ್ತಲೇ ಇದ್ದಾರೆ. ಆದರೆ ಇಂತಹ ಸ್ಥಿತಿ ಕಾಂಗ್ರೆಸ್ ನಲ್ಲಿಲ್ಲ. ನಮ್ಮಲ್ಲಿ ಭಿನ್ನಮತವಿದ್ದರೂ ಪಕ್ಷದ ವಿಷಯ ಬಂದಾಗ ಕಾಂಗ್ರೆಸ್ಸಿಗರೆಲ್ಲ ಒಂದೇ ಎಂದು ಹೇಳಿದರು.

ಸಿರಾ ಹಾಗು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!