Belagavi

ಪುನಃ ಸಿಬಿಐ ವಶಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ

ಬೆಳಗಾವಿ, ೭- ನಿನ್ನೆ ಶುಕ್ರವಾರ ಸಂಜೆಯೇ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆಯಲು ಕೋರ್ಟ್ ಆದೇಶವಿದ್ದರೂ ರಾತ್ರಿ ಕೈದಿಗಳನ್ನು ಹಸ್ತಾಂತರಿಸಲು ಬಂದಿಖಾನೆ ನಿಯಮಗಳಲ್ಲಿ ಅವಕಾಶವಿಲ್ಲದ್ದರಿಂದ ಇಂದು ಶನಿವಾರ ಮುಂಜಾನೆ ಸಿಬಿಐ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದು ಮುಂಜಾನೆ 11 ಗಂಟೆಗೆ ದಾರವಾಡ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪುನಃ ತಮ್ಮ ವಶಕ್ಕೆ ಪಡೆಯಲಿದ್ದಾರೆ.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ಕುಲಕರ್ಣಿ ಸೋಮವಾರದವರೆಗೆ ನ್ಯಾಯಾಲಯದ ಆದೇಶದನ್ವಯ ಸಿಬಿಐ ವಶದಲ್ಲಿರಲಿದ್ದಾರೆ.

ಕುಲಕರ್ಣಿ ಅವರ ಜನ್ಮದಿನವಾದ ಇಂದು ಅವರನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು, ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!