Tamil Nadu

ಬಿಜೆಪಿ ವಿಜಯ ಶೂಲ ಯಾತ್ರೆ; ಹಲವರ ಬಂಧನ

ಚೆನ್ನೈ, ನ 6- ತಮಿಳುನಾಡಿನಲ್ಲಿ ವಿಜಯ ಶೂಲ ಯಾತ್ರೆ ಆರಂಭಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪಕ್ಷದ ನಾಯಕರಾದ ಎಚ್.ರಾಜಾ, ಪೊನ್ ರಾಧಾಕೃಷ್ಣನ್ ಸೇರಿದಂತೆ ಹಲವು ಮುಖಂಡರನ್ನು ದಸ್ತಗಿರಿ ಮಾಡಿದ್ದಾರೆ. ಶುಕ್ರವಾರದಿಂದ ಡಿಸೆಂಬರ್ 6 ರವರೆಗೆ ಕುಮಾರಸ್ವಾಮಿ(ಮುರುಗ) ಆಶೀರ್ವಾದಕ್ಕಾಗಿ ತಿಂಗಳ ಕಾಲ ‘ವೆಟ್ರಿ ವಾಲ್ ಯಾತ್ರೆ’ (ವಿಜಯ ಶೂಲ ಯಾತ್ರೆ) ಆರಂಭಿಸಲಾಗುವುದು ಎಂದು ಪಕ್ಷದ ರಾಜ್ಯ ಅಧ್ಯಕ್ಷ ಮುರುಗನ್ ಇತ್ತೀಚೆಗೆ ಗೋಷಿಸಿದ್ದರು. ಆದರೆ, ಕೊರೊನಾ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆಗೆ ರಾಜ್ಯ ಸರ್ಕಾರ ಅನುಮತಿಸುವುದಿಲ್ಲ ಗುರುವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿತ್ತು.

ಮತ್ತೊಂದೆಡೆ, ತಿರುವಳ್ಳೂರು ಜಿಲ್ಲೆಯ ತಿರುತ್ತಾಣಿಯ ಮುರುಗ ದೇಗುಲದಿಂದ ಈ ಯಾತ್ರೆ ಆರಂಭಿಸಿಯೇ ತೀರುವುದಾಗಿ ಮುರುಗನ್ ಸ್ಪಷ್ಟಪಡಿಸಿದ್ದರು. ಮುರುಗನ ಈ ಕಾರ್ಯಕ್ರಮ ನಡೆಸುವುದು ನಮ್ಮ ಹಕ್ಕು ಎಂದು ಅವರು ಹೇಳಿದ್ದರು.

ಶುಕ್ರವಾರ ಬೆಳಿಗ್ಗೆ ಅವರು ಮುರುಗ ದೇವಾಲಯಕ್ಕೆ ತೆರಳುತ್ತಿದ್ದಾಗ ಚೆನ್ನೈ-ತಿರುವಳ್ಳೂರು ಗಡಿಯಲ್ಲಿ ಬಿಜೆಪಿಯ ವಾಹನಗಳನ್ನು ಪೊಲೀಸರು ಅಡ್ಡಗಟ್ಟಿದ್ದರು. ಮುರುಗನ್ ಹಾಗೂ ತರ ಕೆಲವರಿಗೆ ಮಾತ್ರ ದೇಗುಲಕ್ಕೆ ತೆರಳಲು ಅನುಮತಿ ನೀಡಿದರು. ಪಕ್ಷದ ಉಳಿದ ಕಾರ್ಯಕರ್ತರನ್ನು ಅಲ್ಲಿಯೇ ತಡೆದರು. ಮತ್ತೊಂದೆಡೆ, ಮುರುಗನ್ ದೇಗುಲ ತಲುಪಿದ ಅವರು ಪೂಜೆಯ ನಂತರ ‘ವೆಟ್ರಿ ವಾಲ್ ಯಾತ್ರೆ’ ಪ್ರಾರಂಭಿಸಿದರು. ಆದರೆ, ಇದಕ್ಕೆ ಅನುಮತಿ ಪಡೆಯದ ಕಾರಣ ಮುರುಗನ್ ಸೇರಿದಂತೆ ಪಕ್ಷದ ಹಲವು ಮುಖಂಡರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು.

 

Leave a Reply

Your email address will not be published. Required fields are marked *

Back to top button
error: Content is protected !!