Belagavi

ಡಿಸಿಸಿ ಬ್ಯಾಂಕ್ ಚುನಾವಣೆ; ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಸೋಲು

ಬೆಳಗಾವಿ, ೬- ತೀವ್ರ ಕುತೂಹಲ ಮೂಡಿಸಿದ್ದ ಬಿಡಿಸಿಸಿ ಬ್ಯಾಂಕ್ ನ ಮೂರು ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಜಿದ್ದಾಜಿದ್ದಿಗೆ ಕಾರಣವಾಗಿದ್ದ ಖಾನಾಪುರ ಪಿಕೆಪಿಎಸ್ ನಿಂದ ಶಾಸಕಿ ಅಂಜಲಿ‌ ನಿಂಬಾಳ್ಕರ್ ಸೋಲು ಕಂಡಿದ್ದು ಮಾಜಿ ಶಾಸಕ ಅರವಿಂದ ಪಾಟೀಲ ಗೆಲುವು ಸಾಧಿಸಿದ್ದಾರೆ.

ಸಂಬಂಧಿಸಿದಂತೆ ಚುನಾವಣಾಧಿಕಾರಿ ಸೈಯಿದಾ ಆಫ್ರೀನ ಬಾನು ಬಳ್ಳಾರಿ, ಫಲಿತಾಂಶ ಘೋಷಣೆ ಮಾಡಿದ್ದು, ಬೆಳಗಾವಿ ಜಿಲ್ಲಾ ಸಹಕಾರಿ ಮತಕ್ಷೇತ್ರದಲ್ಲಿ 16 ರಲ್ಲಿ 3 ಕ್ಷೇತ್ರದ ನಿರ್ದೇಶಕರ ಮತಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು ಇದರಲ್ಲಿ ಖಾನಾಪುರ ಪಿಕೆಪಿಎಸ್ ನಿಂದ ಅರವಿಂದ ಪಾಟೀಲ 27, ಅಂಜಲಿ ನಿಂಬಾಳ್ಕರ್ 25 ಮತ ಪಡೆದಿದ್ದಾರೆ.

48 ಪಿಕೆಪಿಎಸ್ ಮತದಾರರುಳ್ಳ ಖಾನಾಪುರ ತಾಲೂಕಿನಲ್ಲಿ 28 ಮತದಾರರು ಶಾಸಕಿ ಅಂಜಲಿಯವರನ್ನು ಬೆಂಬಲಿಸಿದ್ದರು. ಕ್ರಾಸ್ ವೋಟಿಂಗ್ ತಪ್ಪಿಸಲು ಇವರೆಲ್ಲರನ್ನೂ ಅಂಜಲಿ ಮಹಾರಾಷ್ಟ್ರದ ರೆಸಾರ್ಟ್ ಗೆ ಶಿಫ್ಟ್ ಮಾಡಿ ನೇರವಾಗಿ ಮತಗಟ್ಟೆಗೇ ಕರೆದುಕೊಂಡು ಬಂದಿದ್ದರು. ಆದರೂ ಅವರಲ್ಲಿ ಮೂವರು ಅಂಜಲಿಯವರ ವಿರುದ್ಧ ಮತ ಚಲಾಯಿಸಿದ್ದರಿಂದ ಅವರು ಮುಖಭಂಗ ಅನುಭವಿಸುವಂತಾಗಿದೆ.

ರಾಮದುರ್ಗ ತಾಲೂಕಿನ ಪಿಕೆಪಿಎಸ್ ಸೊಸೈಟಿಯಿಂದ ಭೀಮಪ್ಪ ಬೆಳವಂಕಿ13 ಮತಗಳನ್ನು ಪಡೆದಿದ್ದಾರೆ. ಶ್ರೀಕಾಂತ್ ಢವಣ 16 ಮತಗಳನ್ನು ಪಡೆದಿದ್ದಾರೆ. ಇದರಲ್ಲಿ ಶ್ರೀಕಾಂತ್ ಢವಣ ಗೆಲವು ಸಾಧಿಸಿದ್ದಾರೆ.

ನೇಕಾರ ಸಹಕಾರ ಕ್ಷೇತ್ರದಿಂದ ಕೃಷ್ಣಾ ಅನಗೋಳಕರ 55 ಮತಗಳನ್ನು ಪಡೆದಿದ್ದಾರೆ. ಗಜಾನನ ಕೊಳ್ಳಿ 38 ಮತಗಳನ್ನು ಪಡೆದಿದ್ದಾರೆ. ಇದರಲ್ಲಿ ಕೃಷ್ಣಾ ಅನಗೋಳಕರ ಗೆಲವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!