Puducherry

ಬಿಜೆಪಿಯಿಂದ ಕೋಮು ಹಿಂಸಾಚಾರ ಸೃಷ್ಟಿ ಗುರಿ: ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ

ಪುದುಚೇರಿ, ನವೆಂಬರ್ 6 – ತಮಿಳುನಾಡಿನಲ್ಲಿ ಬಿಜೆಪಿಯ “ವೇಲ್ ಯಾತ್ರೆ” ಯ ಮುಖ್ಯ ಗುರಿ ಕೋಮು ಹಿಂಸಾಚಾರವನ್ನು ಸೃಷ್ಟಿಸುವುದಾಗಿದೆ ಎಂದು ಮುಖ್ಯಮಂತ್ರಿ ವಿ ನಾರಾಯಣಸಾಮಿ ಆರೋಪಿಸಿದ್ದಾರೆ.

ಡೆಂಗ್ಯೂ ಜಾಗೃತಿ ರಾಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಪುದುಚೇರಿ ಎಲ್ಲಾ ಧರ್ಮಗಳಿಗೆ ಪ್ರಾಮುಖ್ಯತೆ ನೀಡುವ ಶಾಂತಿಯುತ ರಾಜ್ಯವಾಗಿದೆ ಮತ್ತು ಯಾವುದೇ ಧಾರ್ಮಿಕ ತತ್ವಗಳನ್ನು ಅನುಸರಿಸುವಲ್ಲಿ ಇಲ್ಲಿ ಯಾವುದೇ ತೊಂದರೆಗಳಿಲ್ಲ ಎಂದರು.

ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಕೋಮು ಹಿಂಸಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಅವರು ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣ ರಾವ್ ಅವರೊಂದಿಗೆ ಮಣಿಮೆಗಲೈ ಸರ್ಕಾರಿ ಶಾಲೆಯಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಡೆಂಗ್ಯೂ ಜಾಗೃತಿ ರಾಲಿಗೆ ಚಾಲನೆ ನೀಡಿದರು. ಅಲ್ಲಿ ವಿದ್ಯಾರ್ಥಿಗಳು ಫಲಕಗಳು ಮತ್ತು ಭಿತ್ತಿಪತ್ರ ವಿತರಿಸುವ ಮೂಲಕ ಡೆಂಗ್ಯೂ ತಡೆಗಟ್ಟುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!